ಅಧಿಪತಿಯು ನೀನೇ ಅಂತಿಜನಾಭನೇ
ಎನ್ನಾಧಿಪತಿಯು ನೀನೇ|
ನೀ ಕೈಯ ಬಿಟ್ಟರೆ ಅಧಃಪತನು ನಾನೇ
ಅಕಳಂಕ ಚರಿತನೆ ಕೈಬಿಡದೆನ್ನನು
ಕಾಪಾಡೊ ಹರಿಯೇ||

ನನ್ನ ಇತಿಯು ನೀನೇ ಮತಿಯು ನೀನೇ
ಗತಿ ಕಾಣಿಸುವ ಸ್ಮೃತಿಯು ನೀನೇನೇ|
ನನ್ನ ಪಾಪಪುಣ್ಯದ ಫಲಾನುಫಲ ನೀನೇ
ನನ್ನ ಜನ್ಮ ಜನ್ಮಾಂತರದ ಗುರುದೈವ ನೀನೇ||

ಆಡಿಸುವವನು ನೀನೇ ಅಳಿಸುವವನೂ ನೀನೇ
ಆದಿನಾರಾಯಣನೆ ಅನಂತನಾಭನೇ
ಮಂಗಳಕರನೆ ಸುಮಂಗಳಕಾರಣನೇ|
ಪಾಲಿಸೊ ಎನ್ನ ಓ ಪಾರ್ಥಪ್ರೀಯನೇ
ವಸುದೇವಸುತನೆ ದೇವಕಿಕಂದನೇ|
ಶಿಲೆಗಳಿಗೊಲಿದವನೆ ಸರಸಿಜಾಕ್ಷನೇ
ಈ ನರನಿಗೊಲಿಯೋ ಪದುಮನಾಭನೇ||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)