Home / Hamsa R

Browsing Tag: Hamsa R

ದುಡಿಯೋಣ ನಾವು ಒಂದಾಗಿ ದುಡಿಯೋಣ ಬೆವರ ಸುರಿಸಿ ದುಡಿಯೋಣ ಮನಕೆ ಸಂತಸ ತುಂಬೋಣ ||ದು|| ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಗೆಜ್ಜೆ ನಾದ ಉಣ್ಣ ಬಡಿಸಿ || ಸದ್ದು ಗದ್ದಲ ಇಲ್ಲದಂತೆ | ಹೊನ್ನ ಮಳೆಯ ಸುರಿಸೋಣ ||ದು|| ಒಂದೇ ಜಾತಿ ಒಂದೇ ಮತವೆಂಬ | ಪಚ್ಚೆ ...

ಬನ್ನಿ ಬನ್ನಿ ಯೋಧರೇ | ದೇಶ ಸೇವೆ ಮಾಡುವ || ದೇಶಕಾಗಿ ದುಡಿಯುವ | ದೇಶಕಾಗಿ ಮಡಿಯುವ ||ಬ|| ಜನ್ಮ ಭೂಮಿ ನಮ್ಮ ಭೂಮಿ | ಧರ್‍ಮದಾತೆ ನಮ್ಮ ಮಾತೆ || ಧರ್‍ಮದಿಂದ ನಡೆದು ನಾವು | ದಕ್ಷತೆಯನ್ನು ತೋರುವ ||ಬ|| ಸಿಡಿಲು ಗುಡುಗು ಏನೇ ಬರಲಿ | ಕೋಮು ಗ...

ನಾದ ವೇದಗಳ ಶಿವೆ ಭರತ ಮಾತೆಯ ಓಂಕಾರಗೀತೆಯ ಶಿರೋಮಣಿಗಳ ಮಾಲೆಯೆ ನಿನಗೆ ವಂದನೆ ನಿನಗೆ ವಂದನೆ ಶಿವೆ ||ನಾ|| ಆನಂದಾನುರಾಗದ ಪದ್ಮ ಮುಕುಟ ಶೋಭೆಯೆ ಸುರನರ ಸೇವಿತೆ ಸುಂದರಿ ಮಾಧವಿ ಲಾವಣ್ಯಕಲಾವಲ್ಲಭೆ ನಿನಗೆ ವಂದನೆ ಶಿವೆ ||ನಾ|| ಸಂಗೀತ ಸಾಹಿತ್ಯ ಪ...

ಓ ಮಕ್ಕಳೆ ಚೆಲುವಿನ ನಲಿವಿನ ಹೂವುಗಳೆ || ಇಂದಿನ ಮಕ್ಕಳೆ ನೀವು ಮುಂದಿನ ಪ್ರಜೆಗಳೆ ನೀವು ಅಂಧಕಾರದೆ ದೀಪ ಹಚ್ಚಿ ಹಣತೆಯ ಕಿರಣಗಳಾಗಿರಿ || ಒಂದೇ ತಾಯ ಮಕ್ಕಳೆಂದು ಒಂದೇ ಕೊಂಬೆ ಹೂಗಳೆಂದು ಹಲವು ಮರಗಳು ಬೇರೆಯಾದರೇನು ಹಸಿರು ಒಂದೇ ಉಸಿರು ಎನ್ನಿರಿ...

ನಮ್ಮ ದೇಶ ಭಾರತ ನಮ್ಮ ತಾಯಿ ಭಾರತಿ ನಾವು ಬೆಳಗುವೆವು ಅವಳಿಗಾರತಿ ಭಾವೈಕ್ಯಗಾನವೆ ಇವಳ ಕೀರುತಿ ಭರತ ಖಂಡ ನಮ್ಮಖಂಡ ಭೂಗೋಳ ವಿಜ್ಞಾನ ಅಖಂಡ ಚರಿತ್ರೆ ಪರ್‍ವಗಳ ವಿಶ್ವಚೇತನ ಮನ ಮಿಡಿಯುವ ನವನಿಕೇತನ || ಸಹಸ್ರ ವೀರ ಬಾಹುಬಲಿಗಳ ಖಡ್ಗ ವೀರ ಕಲಿಗಳ ತ್...

ಓ ದೇವಿಯೆ ಭರತ ಮಾತೆಯೆ ನಿನ್ನ ಹೇಗೆ ಬಣ್ಣಿಸಲಿ ತಾಯೆ ನಿನ್ನ ಬಣ್ಣಿಸಲಸದಳವು ಮಾತೆಯೆ ಮಾತು ಸಾಲದಾಗಿದೆ ನಿನ್ನ ನೋಡಲು ಯುಗಗಳೆ ಸಾಲದು ನಿನ್ನ ಹೊಗಳಲು ಜನ್ಮಗಳೆ ಸಾಲದು ಹಸಿರು ಸೀರೆಯನುಟ್ಟು ಸಂಸ್ಕೃತಿಯೆ ಹಣೆಗೆ ಬೊಟ್ಟು ಕಾವ್ಯಗಳೆ ನಿನ್ನಯ ಕೇಶರ...

ಜನ್ಮಭೂಮಿ ಇದು ಕರ್‍ಮ ಭೂಮಿ ಇದು ಸ್ವರ್ಗಕ್ಕಿಂತ ಮಿಗಿಲಾದುದು ಆದಿಯಿಂದಲಿ ಅನಾದಿಕಾಲದ ವಿಶ್ವಕರ್‍ಮದ ಭೂಮಿ ನಮ್ಮದು ಭರತ ಭೂಮಿ ಇದು ಪುಣ್ಯ ಭೂಮಿ ಇದು ವೀರ ಚರಿತೆಯ ಬೀಡಿದು ರಾಜ ಮಹಾರಾಜರ ತ್ಯಾಗ ಶೀಲರ ಭೂಮಿನಮ್ಮದು ಗಂಗೆ ತುಂಗೆಯರು ಹುಟ್ಟಿದರಿಲ...

ಭವ್ಯ ಭಾರತ ಭೂಮಿ ನಮ್ಮದು ನವ್ಯ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನೇಮಗಳ ಭಾವೈಕ್ಯತೆಯ ಗೂಡು ನಮ್ಮದು ಜನನಿ ಜನುಮ ಭೂಮಿ ಸ್ವರ್‍ಗ ತಾಣ ಮುಗಿಲ ಕಾನನದೊಳಗಣ ಸಮೃದ್ಧಿ ಚೆಂದ ಗಂಧ ಮೆರೆದ ಸಂಪದ್ಭರಿತ ನಾಡು ನಮ್ಮದು ಕನಕ ವೃಷ್ಟಿವನಿತ ಭಾವ ನಿತ್...

ಪ್ರೀತಿ ಎಂಬ ಹೂದೋಟದಲ್ಲಿ ನನ್ನ ಭಾವನೆಗಳ ಎಳೆ‍ಎಳೆಯಲ್ಲಿ ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ ನನ್ನ ಹೂವುಗಳು ಅರಳಿದವು ಧನ್ಯವಾದ ಅವನಿಗೆ ಅವನು ನೀಡಿದ ಚೈತನ್ಯಕೆ ನಮಿಸುವೆನು ಸದಾ ಅವನ ದಿವ್ಯ ಚರಣಕೆ ಅವನ ಕೃಪೆಯು ಇರಲಿ ನಮ್ಮ ಬಾಳಿಗೆ ರವಿಯು ಮ...

ಓ ಭಾನು ಓ ಹಕ್ಕಿ ನೀಲಾಕಾಶದ ಚುಕ್ಕಿ ಸೆರೆಯಾಗಿಹೆ ನಾನು ನಿನ್ನಲ್ಲಿ ಬಾಳ ಕವನ ಹಂದರದಲ್ಲಿ ಆ ಎಲೆ ಈ ಹೂವು ಎಲೆಮರೆಯಾಗಿ ನಾನು ಮುಡಿದಾ ಮಲ್ಲಿಗೆ ಎಳೆಯಲ್ಲಿ ಒಂದೊಂದಾಗಿ ಸೇರಿ ನಲಿಯೋಣ ಆ ನೆನಪು ಈ ಸೊಗಸು ತಂಗಾಳಿಯಲಿ ತೇಲಿ ಉಯ್ಯಾಲೆಯಂತಾಡಿ ಚೈತ್ರ...

1...1011121314...30

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...