Home / Shishunala Sharief

Browsing Tag: Shishunala Sharief

ಸಂಗರ ಗೆಲಿದಾ ಯಜಿದಾ ಸಂಗರದಿ ಅಂಗನಿಗೆ || ಪ || ಅಂಗನಿಗೆ ಸೋಜಿಗದಿ ಕಾಶೀಮಶಹಾ ಶೃಂಗರದಿ ||೧|| ಜವಾಜಿ ರಥಗಳ ತಯ್ಯಾರಮಾಡಿ ಅಜಹರಿಹರ ಸುರರು ಸ್ವರ್ಗದಲಿ ಕೊಂಡಾಡಿ || ೨ || ಧಾಮಶಪುರದ ಸೀಮಿಗೆ ತಾ ಆರಾಮದಿ ಈ ಭೂಮಿಗೆ ಶಿಶುನಾಳಧೀಶನ ದಯದಿ || ೩ |...

ಬಂದಾನೋ ಹನೀಪನೋ ಸುಂದರನೋ || ಪ || ಬಂದು ಸಮರದೊಳಗೆ ದು೦ದುಕಾಳಗಮಾಡಿ ಕೊಂದಾನೋ ಯಜೀದರ ಸ್ಯೆನ್ಯವನು || ೧ || ಕೊಂದ ಹನೀಪನ ಕೊಲ್ಲದೆ ಹೋದರೆ ಇಂದು ಯಜೀದನೆಂಬ ಹೆಸರ‍್ಯಾತಕೆಂದು || ೨ || ಅಂದು ಯಜೀದನು ಹನೀಪನ ಹುಡಕುತ ಬಂದಾನೋ ರಣದೊಳಗೆ ಅವನು ||...

ನಡಿದಾ ಸಮರದಿ ಮಡಿದಾ ಕಾಸೀಮದೊರಿ || ಪ || ಸುತನೇ ನಿನ್ನ ಹತಮಾಡಿದವರಿಗೆ ಹಿತವಾಯ್ತೇ ಹಿತವಾದ ಕಾಸೀಮ ಮನಕೊಪ್ಪುವ ಬಾಲ || ಅ. ಪ. || ಹಗಲು ಇರುಳು ನಿನ್ನ ಮರೆಯಲಾರೆನು ಮಗನ ಮುಖವ ತೋರೋ ಅಗಲಿ ಸಹಿಸಲಾರೆನು || ೧ || ಅಗ್ನಿ ಕುಣಿಗೆ ದೇಹ ಮಗನೇ ಚಲ...

ಸಣ್ಣ ಬಾಲಕರೋ ಮಹಮ್ಮದ ಹನೀಪಸಾಹೇಬರೋ || ಪ || ತಾಯಿ ದೂತನು ಕೇಳಲಿಲ್ಲ ಊಟ-ಉಡುಗರಿ ಮಾಡಲಿಲ್ಲ ನಿತ್ಯ ಕುಡಿವರೋ ಹಾಲ ಮಹಮ್ಮದ ಹನೀಪಸಾಹೇಬರೋ || ೧ || ತೋಟದೊಳಗಿನ ಕಲ್ಲು ತೆಗದು ನೀರು ಕುಡಿದು ಕೆಡಿಸ್ಯಾರಲ್ಲ ಸುದ್ದಿಕೇಳಿ ಬಂದು ಮೌಲಾ ವಾದಹಾಕ್ಯಾ...

ಈ ಮಾತು ಕೇಳರಿ ಐಸುರ ಮೊಹರಮ್ ರಿವಾಯತೋ || ಪ || ರಾಚಾಧಿರಾಜ ಸಮರ ಭೂಮಿ ಕಂದಿ ಕುಂದಿತೋ || ೧ || ಮದೀನ ಮಕ್ಕಾ ಶಾರದಿ ಮಹಾ ಕೌತುಕಾದೀತೋ ಆ ದಿನದ ಕತ್ತಲ ಕಾಳಗ ಕರ್ಬಲ ಶಹಾದತೋ || ೨ || ಕಿಲ್ಲೆಸುತ್ತವಾದಲಾವಿ ಡೋಲಿ ಮೇಲಕೆದ್ದಿತೋ ಭೂತಳದಿ ಭಾನುಕ...

ಧೀನ ಖೇಲ ಮದೀನದಲಾವಿಯ ನೋಡ || ಪ || ಸಾಲು ಮಳಿಗೆ ಬೈಲಾದ ಬೈಲಿನೊಳು ಕಲ್ಲುಮುಳ್ಳಿನ ಮೇಲೆ ಕಾಲನೂರಿ || ೧ || ಮರಣ ಶರಣರಿಗೆ ಪಂಚಾಮೃತ ಘನ ಸುರನ ಶಾಖವನು ಸುಟ್ಟು ಧರಣಿಯ ಮೇಲೆ || ೨ || ಭೂವಲಯದೊಳು ಶಿಶುನಾಳಧೀಶನ ಹಾವಿನ ಫಣಿಯನು ಮೆಟ್ಟಿ ತುಳದಿತ...

ದುಃಖದಲಾವಿ ಏ ಐಸುರ ಪೇಳುವ ಸುದ್ಧಿ ಮಕ್ಕಾಮದೀನ ವಿಸ್ತಾರ || ಪ್ರ || ಲಕ್ಷವಿಟ್ಟು ಕಥಿಗಳ ಕೇಳರಿ ಸರ್ವರು ಸಿಕ್ಕಾರ ಯಜೀದನ ಗಡಿಯಲ್ಲಿ ತಾವು ಹೋಗಿ ಶೇಷಧರ ಗಿರಿಜೇಶ ನಿತ್ಯ ಪಾರೇಶಗೋಕುಲ ಹಾಸ್ಯ ಎನ್ನುತ ಜನ ಭಾಷೆ ಬಲ್ಮೆ ಹಾಸ್ಯನರವರ ದಾಸರಲ್ಲವು ಕ...

ಕೋಲಾಹಲವಾದಿತು ಕಲಹದಲಿ ಬಾಳಹೇಳಲಾರೆನು ಕಳಗು೦ದಿ ತಾಳದೆ || ಪ || ಅಲ್ಲಿಗಲ್ಲಿಗೆ ಭಟರೆಲ್ಲರು ಕೂಡುತ ಘನ ನಿಲ್ಲದೆ ಸಮರದಿ ತಲ್ಲಣಿಸಿತು || ೧ || ಮೂರ ದಿವಸ ವಿಷಹಾರಗೊಂಬುತ ರಣ ಧೀರ ಕುಮಾರನೋ ತೋರದಾದಾನೋ || ೨ || ಮೇಧಿನಿಗಧಿಪತಿ ಆದಿ ಶಿಶುವಿನಾ...

ಧೀರಸಮರ ಕಲಿಶೂರರ ಕದನದಿ ಭಾಸ್ಕರಸ್ತಂಗತ ಹತ ಹತ || ಪ || ಧಾರುಣಿಯೊಳು ಪಶ್ಚಿಮ ಶರಧಿಗೆ ಹೋಗಿ ಅಡಗಿದನು ಸತಾನಿತಾ || ೧ || ತನ್ನ ತೇರಿಗೆ ಮುನ್ನೇಳು ಕುದುರೆಗಳು ಸಣ್ಣ ಸಾರಥಿ ರಥ ರಥ ಚನ ಚಲುವನೋ ಸೂರ್ಯಕಿರಣ ಮೈ ಕಣ್ಣೀರ ಸುರಸಿದ ಪತಾನಿತಾ || ೨ ...

ಹೊತ್ತು ಮುಳುಗಿತು ಜಗದಿ ಕತ್ತಲಾದಿತು || ಪ || ಮತ್ತೆ ಗಗನತಾರಿ ಮೂಡಿ ಗೊತ್ತು ಐಸುರ ಚಂದ್ರನ್ನ ನೋಡಿ ಗೊತ್ತುಗೆಡಸಿತು ರಣದಿ ಕಿತ್ತು ಜಡಸಿತು || ಅ. ಪ. || ಹಗಲಿ ಹರದಿತು ಸಮರ ಕತ್ತಲಾದಿತು ಮತ್ತೆ ಬರುವ ಮೂಡಲಾದ್ರಿ ದಿಕ್ಕಿನೊಳಗೆ ಬಾಸ್ಕಾರಾದ್...

1...89101112...41

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...