ಜನ್ಮ

ಹುಟ್ಟುತಲೆ ನನ್ನ ಜನ್ಮ ಬಡಕುಟುಂಬದಲ್ಲಿಯೇ
ಮುಂದೆ ಮುಂದೆ ಬೆಳೆಯಲು ಬಡಕುಟುಂಬವೇ ಕಾರಣ||

ನಾನು ಬಡಕುಟುಂಬದಲ್ಲಿ ಜನಿಸಿ ಶ್ರೀಮಂತನೆಂದು
ಅರಿತು ಸುಖ ದುಃಖಗಳೆಲ್ಲವು ನಾ ಕಂಡೆ
ನಾನು ಬಡವನೆನ್ನದೇ ಹಿಂಜರಿಯದೇ
ಸಾಧನೆಯ ಸಾಧಿಸುವಲ್ಲಿ ಮುಂದುವರೆದೆ

ಜೀವನದಲ್ಲಿ ಮಾತೃದೇವೋಭವ
ಪಿತೃದೇವೋಭವ ಜೊತೆಗೆ ದರಿದ್ರ
ದೇವೋಭವ ಸಿರಿವಂತಿಕೆ ಉಕ್ತಿಯನ್ನು
ಜೀವನದಲ್ಲಿಯೇ ನಾ ಅಳವಡಿಸಿಕೊಂಡೆ.

ಸಾಧನೆಗೆ ಅಸಾಧ್ಯವಾದುದು ಯಾವುದಿಲ್ಲ
ಸಾಧಿಸಬೇಕೆಂಬ ಛಲಮಾತ್ರ ಬೇಕು
ಎಂಬುದನ್ನರಿತು ಸಾಧಿಸಲು ಹಗಲಿರುಳು
ಪ್ರಯತ್ನಿಸಿ ಸಾಧನೆಯ ಯಶಸ್ಸು ನಾ ಕಂಡೆ

ಅಜ್ಞಾನವೆಂಬ ಕತ್ತಲೆಯು ನಾ ಕಳಕೊಂಡೆ
ಸುಜ್ಞಾನವೆಂಬ ಬೆಳಕು ನಾ ಪಡಕೊಂಡೆ
ಭಾವಿ ಜೀವನದ ಅಮರ ಜ್ಯೋತಿಯಾದೆ
ಅವಗುಣಗಳೆಂಬ ಬೇರು ಅಳಿಸಿಕೊಂಡೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ
Next post ಆವರ್ತನೆ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…