ಬರಬಾರದೋ ಯೋನಿಯೊಳು ಜನಿಸಿ
ತಿಳಿದು ಒಂದೊಂದು ಎಣಎಣಿಸಿ ||ಪ||
ರಕ್ತದಿ ಬಿದ್ದು ಬಂದಿಯೋ
ಎದ್ದು ಬಂಧನದೊಳು ಬಂದು ಸಂದಿಸಂದಿಗೆ ||೧||
ಸಾವು ಸಂಗತಿಯಾಗಿ ಏಜೀದನ ಒಳಪೊಕ್ಕು
ಮಾಯಕ್ಕೆ ಮರುಳಾಗಿ ಮಣ್ಣುಗೂಡಿಸಿ ||೨||
ಧರಿಯೊಳು ನವಲಗುಂದ ನಾಗಲಿಂಗ
ಪರಮಚರಣಕ್ಕೆ ಹೊಂದಿ ಪವಿತ್ರನಾಗಿ ||೩||
*****
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013