ಮುಳು ಮುಳು ಸೌತೆ
ಮುಳುಸೌತೆ

ಬರ್‍ತಾ ಬರ್‍ತಾ ಮುಳುಸೌತೆ
ಅಗೋಯಿತು ಕುಕುಂಬರ್
ಇದು ಮುಳುಸೌತೇಂದರೆ
ಯಾರೂ ನಂಬರ್
ಮುಳುಸೌತೆ ಅಲ್ಲ ಇದು
ಕುಕುಂಬರ್ ಎಂಬರ್
ಕುಕುಂಬರಾದರೆ ಕೊಂಬರ್
ಕೊಚ್ಸಳ್ಳಿ ಮಾಡ್ಕೊಂಡು ಉಂಬರ್
ಅಥ್ವಾ ತೋಟದಿ ಅಡಗಿಕೊಂಬರ್
ರಾತ್ರೆಯೆಲ್ಲಾ ಕದ್ದು ತಿಂಬರ್

ಕರ್ ಕುರ್ ಕರ್ ಕುರ್

ಹೇಳತೆ ಸೌತೆ ನಾನೆ ಕುಕುಂಬರ್
ತರಕಾರಿಗಳಲಿ ಒಂದನೆ ನಂಬರ್
ಕುದುಕನಿಗಿಷ್ಟ ಇಲಿಗೂ ಇಷ್ಟ
ಕಾಯದೆ ಇದ್ದರೆ ನಿಮಗೇ ನಷ್ಟ

ಕರ್ ಕುರ್ ಕರ್ ಕುರ್!
*****