ಅಣಬೆ ಕೊಡೆ ಬೇಕು ನನಗೆ
ಹಿಡಿಯಲು ಕೈಗೆ ಮಿದು
ಧರ್ಮಕೆ ಸಿಗುವಂಥದು
ಹಳ್ಳ ಕೊಳ್ಳದ ಬದಿಯಲ್ಲಿ
ಕುಂಬು ಮರಗಳ ಬುಡದಲ್ಲಿ

ಫೇರಿಗಳದರಲಿ ತೂಗಾಡಬೇಕು
ದೇವತೆಗಳೂ ಸಹ ಬೇಕೆನಬೇಕು
ಎನಗೊಂದಣಬೆ ನಿನಗೊಂದಣಬೆ
ಸೂರ್ಯದೇವರಿಂಗೆ ನೂರಾರು ಅಣಬೆ
ಮಳೆಹನಿ ಬಿದ್ದರೆ ಉರುಳುರುಳಣಬೆ!
*****

Latest posts by ತಿರುಮಲೇಶ್ ಕೆ ವಿ (see all)