ಯುಗಾದಿಗೆ ಗಿಡಬಳ್ಳಿಗಳು ಚಿಗುರುವಾಗ
ಮೊಗ್ಗುಗಳು ಬಿರಿಯುವಾಗ
ಕ್ಯಾಮರೀಕರಿಸಿಕೊಳ್ಳಲು ರೀಲ್ ತಂದು
ಕ್ಯಾಮರಾ ಸೆಟ್ ಮಾಡಿಟ್ಟಿದ್ದೆ.
ಮಗ ಕಾಲೇಜ್ ಡೇ ಗೆಂದು ಹೋಗಿ
ಒಂದೂ ರೀಲ್ ಉಳಿಸದೆ
ಇದ್ದದ್ದನ್ನೆಲ್ಲಾ ಕ್ಲಿಕ್ಕಿಸಿಕೊಂಡು ಬಂದು ಬಿಟ್ಟ.
ಫೋಟೋಗಳು ಕೈಯಲ್ಲಿವೆ
ಮಗನ ಚಿಗುರುವ ಕನಸುಗಳು
ಬಣ್ಣಬಣ್ಣದ ವೇಷದ ಎಳೆಯ
ಹುಡುಗರ ಹುಡುಗಿಯರ ಗುಂಪು
ಗೊಂಚಲುಗಳು ನೋಡಿ
ನೆತ್ತಿಗೇರಿದ ಪಿತ್ತು ಕೆಳಗಿಳಿಸಿ
ಈ ಎಳೆಯ ಚಿಗುರ ಯುಗಾದಿಯನ್ನೆಲ್ಲಾ
ನನ್ನ ಕಣ್ಣಲ್ಲೇ ಕ್ಲಿಕ್ಕಿಸಿಕೊಂಡುಬಿಟ್ಟೆ.
*****