ಸ್ವಂತಿಕೆಗೆ ತರ್ಪಣ ಬಿಟ್ಟು
ಬೇರೆಯವರ ಭಾವನಗಳಿಗೆ
ನೀರುಣಿಸಿ ಬೆಳಿಸಿ ಪೋಷಿಸುವ
ಅವರ ನಗುವಿನೊಂದಿಗೆ
ನಡೆಯೊಂದಿಗೆ ಬೆರಯುವ…..
ಮೂಕ ಹವ್ಯಾಸಿಗಳಲ್ಲೊಂದಾಗಿ…
ಗಿಡಮರೆ ಕಾಯಿಯಾಗಿ ಬಿದ್ದುಹೋಗುವ
‘ಅವಳು’ ನಿಜಕ್ಕೂ
‘ಮನು’ವಿನ ಅಭಿಪ್ರಾಯಕ್ಕೆ ಖುಷಿ ಕೊಡುವ ಹೆಣ್ಣು
ಆದರೆ ಈ ಹೆಣ್ಣು
ಮನುವಿಗೇ
ತರ್ಪಣ ಬಿಡುವುದಾದರೂ ಎಂದು?
*****


















