ಭವಿಷ್ಯದ ಕ್ರಾಂತಿಕಾರದ ಔಷಧಿಗಳು

ಮಾನವನ ವಂಶವಾಹಿನಿಯಲ್ಲಿರುವ ಸುಮಾರು 3 ಬಿಲಿಯನ್ D.N.A. ಗಳಲ್ಲಿ ಶೇ.25 ರಷ್ಟು ವ್ಯಾಧಿಕಾರಕವೆ೦ದು ಗುರುತಿಸಲಾಗಿದೆ.. ಇದನ್ನೇ ಆಧಾರವಾಗಿಟ್ಟುಕೊ೦ಡು ಆಯಾ ವ೦ಶವಾಹಿನಿಗಳು ಉಂಟುಮಾಡುವ ರೋಗಗಳನ್ನು ತಡೆಗಟ್ಟಲು ಸಮರ್ಥವಾದ ಔಷಧಿಗಳನ್ನು ವಿಜ್ಞಾನಿಗಳು ಕಂಡುಹಿಡಿಯಲಿದ್ದಾರೆ. ಇದರಿ೦ದ ರೋಗಿಯ ‘ಬಯೋಕೆಮಿಸ್ಟ್ರಿ’ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಚುಚ್ಚುಮದ್ದಿನ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಅಸ್ತಮಾಗೆ ಉಪಯೋಗಿಸುವ ‘ಇನ್‌ಹೇಲರ್’ ಗಳಂತೆ ಉಸಿರಿನೊಂದಿಗೆ ಎಳೆದುಕೊಳ್ಳುವ ರೂಪದಲ್ಲಿ ಹಲವಾರು ಔಷಧಿಗಳು ಮಾರುಕಟ್ಟೆಗೆ ಬರಲಿದೆ. ನಾವು ಪ್ರತಿದಿನ ತಿನ್ನುವ ಆಹಾರದೂ೦ದಿಗೆ ದೇಹದೊಳಗೆ ಸೇರುವ ಔಷಧಿಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಕೆಲಸ ಮಾಡುವ ಮಾತ್ರೆಗಳು ಬರುತ್ತವೆ. ಗಂಭೀರ ಆಹಾರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸುಲಭವಾಗಿ ಉಪಯೋಗಿಸಲು ಮತ್ತು ಶೀಘ್ರ ಉಪಶಮನವನ್ನು ನೀಡುವ ಔಷಧಿಗಳು ಅಂಗಡಿಗಳಿಗೆ ಬರಲಿದೆ. ಮುಖ್ಯವಾಗಿ ಟಿ.ಬಿ., ಏಡ್ಸ್‌ನಂತಹ ಭಯ೦ಕರ ವ್ಯಾಧಿಗಳಿಗೂ ಕೂಡ ದಿನಕ್ಕೊಂದು ಮಾತ್ರೆ ಸಾಕು, ಎಂಬ ಕಾಲ ಬರಲಿದೆ.

ಕೆಲವು ಔಷಧಿಗಳು ಬಕ್ಕತಲೆಯ ಮೇಲೆ ಕೂದಲು ಬೆಳೆಸಲು ಉಪಯೋಗವಾದರೆ, ಕೂದಲು ಉದುರುವುದನ್ನು ತಡೆಗಟ್ಟುವಂಥಹ ಔಷಧಿಗಳನ್ನು ಚಿಕಾಗೋ ವಿಶ್ವವಿದ್ಯಾನಿಲಯದ ಸ೦ಶೋಧನಾವೃಂದವು ವಿಧಾನವನ್ನು (ಹೊಸ) ಕಂಡುಹಿಡಿದಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯಕ್ಕೆ ಸೇರಿದ ಹೆಚ್.ಲೀ. ಸ್ಟೀನಿ ಎ೦ಬ ವಿಜ್ಞಾನಿ ಕಾಸ್ಮೆಟಿಕ್‌ಡ್ರಗ್ ಅನ್ನು ಕಂಡು ಹಿಡಿದಿದ್ದಾರೆ. ಇವರು ಕೂದಲು ಬೆಳೆಸಲು ಮತ್ತು ಜ್ಞಾಪಕಶಕ್ತಿಯನ್ನು, ಬುದ್ಧಿವಂತಿಕೆಯನ್ನು ಹೆಚ್ಚಿಸಲು  ಕೂಡ ಔಷಧಿಯನ್ನು ಕಂಡುಹಿಡಿಯುತ್ತಲಿದ್ದಾರೆ. ಇತ್ತೀಚೆಗೆ ವಿಜ್ಞಾನಿಗಳು ಉದ್ರೇಕ, ಮಾನಸಿಕ ಒತ್ತಡಗಳಿಗೆ ಕಾರಣವಾದ ವ೦ಶವಾಹಿನಿಯನ್ನು ಗುರುತಿಸಿದ್ದಾರೆ. ಮಧ್ಯಪಾನ, ಮಾದಕ ದ್ರವಗಳ ಚಟಕ್ಕೆ ಕಾರಣವಾಗುವ ವ೦ಶವಾಹಿನಿಯನ್ನು ಗುರುತಿಸಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ಸಿಗದೆ ಬಾಳೊಂದು ಬಾಳೆ?
Next post ಕಾಲಾಳುಗಳು ಕಲ್ಲಾಳಕ್ಕೆ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys