ಒಮ್ಮೆ ಗುರುವಿಗೆ ಆಪತ್ಕಾಲ ಬಂದಿತು. ಕಡು ಬಡತನ, ರೋಗ, ವೃದ್ಧಾಪ್ಯದಲ್ಲಿ ನರಳುತ್ತಿದ್ದರು ಗುರುಗಳು. ಮಳೆ ಗಾಳಿಗೆ ಬಿದ್ದು ಹೋದ ಜೋಪಡಿಯಲ್ಲಿ ಮಲಗಿದ್ದರು. ಹೊಟ್ಟೆಗೆ ಹಿಟ್ಟಿಲ್ಲದೆ, ರೋಗಕ್ಕೆ ವೈದ್ಯಕೀಯವಿಲ್ಲದೆ ಗುರು ಸಾಯುವ ಶೆಯ್ಯಯಲ್ಲಿದ್ದರು.
ಅವರ ಶಿಷ್ಯರ ತಂಡ ಅಲ್ಲಿಗೆ ಬಂದರು. ‘ನಮ್ಮ ಕೈಯಲ್ಲೂ ಕಾಸಿಲ್ಲ. ನಮಗೇನು ಮಾಡಬೇಕೋ ತಿಳಿಯದು’ ಎಂದರು.
“ಶಿಷ್ಯಂದಿರೆ! ನೀವು ಖಾಲಿ ಹುಂಡಿಗಳಲ್ಲ. ನಿಮ್ಮಲ್ಲಿ ಪ್ರೇಮದ ಗಿಂಡಿ ಇದೆ. ತೋಳಲ್ಲಿ ಬಲವಿದೆ. ಎದೆಯಲ್ಲಿ ಛಲವಿದೆ. ನಿಮ್ಮೊಳಗಿನ ಭಂಡಾರ ತೆಗೆಯಬೇಕೆಂದರು.”
ಶಿಷ್ಯರು ಗುರುಗಳನ್ನು ಆಲಂಗಿಸಿ ತಮ್ಮ ಪ್ರೀತಿ ಭಂಡಾರದಿಂದ ಉಳಿಸಿಕೊಂಡರು.
*****

















