ಕಲ್ಪನೆಯರಂಕೆಗಳ ಭಾರವನು ಬಲ್ಲೆಯೋ?
ತೂಗಿ ತಾಗದ ಗಾಳಿ ಗೋಪುರದ ತುದಿಗೇರಿ
ಬಾಗಿ ಬಾಗದ ಭವ್ಯ ಮೂರುತಿಯ ಮನಸೇರಿ
ಕಲ್ಪ ಕಲ್ಪಾಂತರದ ಕತೆ ಹೇಳ ಬಲ್ಲೆಯೋ?
ಪುಣ್ಯ ಪಾಪವ ತಿಕ್ಕಿ ಹೊಸೆದು ಬತ್ತಿಯ ಮಾಡಿ
ಪೂರ್ಣ ಪಾವನ ಸ್ವರ್ಣ ರೇಣುವಿನ ತೈಲದಲಿ
ಪ್ರಾಣವನು ಪರ್ಣಕ್ಕು ಕೀಳೆಂದು ತಿಳಿದಲ್ಲಿ
ಗಣ್ಯ ಪುರುಷನ ಘೋರ ದೀಪದುರಿಯನು ನೋಡಿ
ಹಾ! ಎಂದು ಕಿರುಚದಿರು! ಹೋ! ಎಂದು ಹಾರದಿರು!
ತಾ! ಎಂದು ಕೇಳದಿರು! ಛೀ! ಎಂದು ಎನಿಸದಿರು!
ಕರ್ಮ ಚರ್ಮಕೆ-ಜೋಡಿ! ಇನ್ನೇಕೆ ಆ ಹಾದಿ!
ಧರ್ಮ ಪ್ರಜ್ವಲಿಪ ಕಿಡಿ ಮುನ್ನವೂ ಅದೆ ಬೀದಿ!
ಮನುಜ ಮಾಡದೇವನಪ್ಪನ್ನೆವರಮಿದು ಬೂದಿ
ಅನುಮಾನಮೇಕೆ ಕವಿ? ಇದಕೆಂಬೆ ದುಷ್ಟವಿಧಿ!
*****
ಬೆಂಗಳೂರು : ೧೯೪೨

















