Home / ಕವನ / ಕವಿತೆ / ನಾಡಿನಳ್ಕರೆ

ನಾಡಿನಳ್ಕರೆ

ಬಾನು ತೆರದಿರೆ ತಿರೆಯ ತೊಯ್ದಿರೆ ಸೂರ್ಯ ತನ್ನನುರಾಗದಿ
ದೃಷ್ಟಿಹೊಂದಿರೆ ರಸೆಗೆ ಹಸುಳೆಯ ಸ್ತನ್ಯಪಾನದ ಭಾವದಿ
ಕನಸುಮುಂದಿರೆ ನಾಡಿನಳ್ಕರೆ ಹೃದಯದೊಳು ಮಡುವಾಗಿರೆ
ನಮ್ಮನಾಡನು ಕುರಿತು ನಾನಿಂದಾವತೆರದೊಳು ಹಾಡಲಿ?

ನಲಿವ ತೋಪಿನ ನಗುವ ಕೆರೆಗಳ ಹುಲುಸು ಪೈರಿನ ಹೊಲಗಳ
ದೂರ ಕುಲಪಿತರಂತೆ ರಕ್ಷೆಗೆ ಕುಳಿತ ಸಾಲಿನ ಮಲೆಗಳ
ಜೀವದಾನದ ಅಂಬುವಾಹದ ಬಯಲ ಮಡಲಿನ ಹಳ್ಳಿಯ
ನಮ್ಮ ನೆಲದೀ ಚೆಲುವ ಕುರಿತಿಂದಾವ ತರದೊಳು ಹಾಡಲಿ?

ದಿನವ ದೇವನ ತೇರಸೆಳೆಯುವ ಕುದುರೆಯೇಳರ ಕೆನತಕೆ
ಹೊಳಲುಗೊಡುವಿಂಚರದ ಕಣಿವೆಯ, ಮಲೆಯ ಗಾಳಿಯ ಮಲೆತಕೆ
ಹುರುಪುಗೊಡುತಿಹ ಹೂತ ಹಿಪ್ಪೆಯ ಕಂಪಿನುಸಿರಿನ ಹುಳುವಿನ
ಹೊಲದ ತಾಯಿಯ ಮೊಲೆಯ ತೆರದೊಳು ಕಣದ ಬಣಬೆಗಳೊಟ್ಟಿನ

ತಳಿರಿನವಕುಂಠನದಿ ಮಾಧವವಧುವಿನಂದದ ಮಾವಿನ
ತರಳಪರ್ಣಾಶ್ವತ್ಥವೃಕ್ಷಕೆ ಮಧುರಳಾಗಿಹ ಬೇವಿನ
ಸ್ವಾವಲಂಬನದಿಂದ ಹಳುವನೆ ತುಂಬುವೊಲು ಬೆಳೆವಾಲದ
ತಂಪುನೆಳಲೊಳು ಬಿಡುವಗೊಳ್ಳಲು ಗೊಲ್ಲನೊಲಿವ ತಮಾಲದ

ಕೋಡತುದಿಯೊಳು ಕಾಡನಡುಗಡೆ ಆತ್ಮದನುಭವಸಾರವ
ತುಂಬಿಯಂದದಿ ಮರ್ತ್ಯ ಕೂಡಿಡೆ ಬಯಸಿ ಭದ್ರಾಗಾರವ
ನಿರ್ಮಿಸಿಹ ನೀತೆರದೊಳೆನುವಂತಿರುವ ಗುಡಿಗೋಪುರಗಳ
ಬದುಕಿಗೂರಿದ ಸೊಬಗೆ ಹರಳಾದಂತೆ ಮೆರೆಯುವ ಪುರಗಳ-

ಮೊಲ್ಲೆ ಮಲ್ಲಿಗೆ ಜಾಜಿ ಸಂಪಗೆ ಸುರಗಿ ಪಾದರಿ ಕೇದಗೆ
ಹಲವು ಹೋಲಿಕೆಗಾದ ಪಂಕಜ ಇರವಂತಿ ಸೇವಂತಿಗೆ
ಪಾರಿಜಾತ ಸುಗಂಧರಾಜ ಕದಂಬ ಜಾಲಿಯ ಸೌಸವ
ಆವ ಮಣ್ಣೀತೆರದ ಕಂಪೊಳು ಪ್ರಕಟಿಪುದು ತನ್ನಾತ್ಮವ?

ತಿಣ್ಣಮಲೆಗಾಳಿಯನು ಹೊಗಳಲೆ ತಪ್ಪಲಿನ ಕಮ್ಮೆಲರನು
ಕೆರೆಯ ಚೆಂದಾವರೆಯ ಹೂಗಳ ಹಾಯ್ದು ಬಹ ತಣ್ಣೆಲರನು
ಮಳೆಯ ಮೋಡದಿ ತೂರಿ ಮಿಂಚನು ಕುಣಿಸಿ ಗುಡುಗನು ದನಿಸುತ
ಜವ್ವನಿಗರೆದೆ ಬೆದರೆ ಬರುವಾ ಮುಂಗಾರ ಬೆದೆಗಾಳಿಯ ?

ಮಾಂದಳಿರ ಕೈಯಾಡೆ ಕೋಗಿಲೆ ಕೂಗೆ ದುಂಬಿಯು ಮೊರೆಯಿಡೆ
ಪಚ್ಚೆಗಿಳಿಗಳ ತೊಡವ ತೋರುತ ಗೋಣಿಮರಗಳು ಸಾಲಿಡೆ
ಹಚ್ಚ ಹಸುರಿನ ನಡುವೆ ಬೆಳ್ಳನೆ ದಾರಿ ಪಯಣಕೆ ಹೊರಟಿರೆ
ನನ್ನ ಚಿತ್ತವ ದಾರಿಗನ ಗೈದೆಲ್ಲಿಗೈದಿಸಲೀ ದಿನ?

ನೆಲಮುಗಿಲ ಕನಸುಗಳ ಕೊಳ್ಳುತ ದನಿಯ ದೋಣಿಯೊಳಾಡಿಸಿ
ಎಲರ ಮಲರಿಸುವಂಥ ಹಕ್ಕಿಗಳಿಂಚರವ ನಾನಾಲಿಸಿ
ಭಾವ ಶೃಂಗಾರದೊಳು ಛಂದೋಗತಿಗೆ ನರ್ತಿಸಲೆಳಸುವೀ
ನುಡಿಯ ಲಾಸ್ಯಕೆ ರಂಗವಾವುದ ಸಜ್ಜುಗೊಳಿಸುವೆನೇಪರಿ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...