ಬರಗಾಲದ ಭೀಕರತೆಯಿಂದಾಗಿ ನೀರು ಎಲ್ಲಿಯೂ ಸಕ್ಕುವುದಿಲ್ಲ ಹಳ್ಳಕೊಳ್ಳ ತೊರೆ, ನದಿಗಳು ಬತ್ತಿಹೋಗಿವೆ. ಇಂಥಹ ಸಂದರ್ಭಗಳಲ್ಲಿ ಕೊಳವೆಭಾವಿಗಳನ್ನು ಕೊರೆದು ಅದರಿಂದ ನೀರು ಸಂಗ್ರಹಿಸಿ ಕುಡಿಯಲು ಉಪಯೋಗಿಸುತ್ತಿರುವುದು ಇಂದು ಸಾಮಾನ್ಯ ದೃಷ್ಯ.
ಆದರೆ ಇಂಥಹ ಕೊಳವೆ ಭಾವಿಗಳ ನೀರು ವಿಷಯುಕ್ತವಾಗಿವೆ ಎಂಬ ಸತ್ಯ ಇತ್ತೀಚಿಗೆ ಬಯಲಾಗುತ್ತಲಿದೆ. ನಗರೀಕರಣದ ಒತ್ತಡದಿಂದಾಗಿ ಸುರಂಗಗಳನ್ನು ತೋಡಿ ನೀರು ತೆಗೆಯುವ ಸಾಹಸದಿಂದಾಗಿ ಅಂತಾರ್ಜಲ ಬಿತ್ತಿಹೋಗುತ್ತಲಿದೆ. ಹೀಗಾಗಿ ಈ ಸುರಂಗ ಭಾವಿಗಳನ್ನು ೧೦೦ ರಿಂದ ೫೦೦ ಅಡಿಗಳವರೆಗೂ ಕೊರೆಯಲಾಗುತ್ತದೆ. ಇದು ತೀವ್ರವಾಗತೊಡಗಿದಂತೆ ‘ಆರ್ಸನಿಕ್’, ಅಂಶವು ಹೆಚ್ಚಿನ ಪ್ರಮಾಣದಲ್ಲಿ ಅಂತರಜಲದ ಜೊತೆಗೆ ಸೇರಿಕೊಳ್ಳುತ್ತದೆ. ಥೈಲ್ಯಾಂಡಿನಂತಹ ದೇಶಗಳು ಈ ಹಿಂದೆಯೇ ಆರ್ಸನಿಕ್, ವಿಷಪ್ರಾಶನದಿಂದ ಬಳಲಿ ಪಾಠ ಕಲಿತಿವೆ. ಥೈಲ್ಯಾಂಡಿನ ಕೆಲವು ಪ್ರದೇಶಗಳಲ್ಲಿ ಮಳೆಯ ನೀರನ್ನು ಸಿಮೆಂಟ್ ಜಾಡಿಗಳಲಿ ಸಂಗ್ರಹಿಸಿ ಬಳಸಿಕೊಳ್ಳಲಾಗುತ್ತದೆ. ಅಲ್ಲಿ ವರ್ಷದ ಹತ್ತು ತಿಂಗಳ ಕಾಲ ಕುಡಿಯಲು ಮತ್ತು ಅಡಿಗೆ ತಯಾರಿಕೆಗೆ ಬೇಕಾಗುವ ನೀರನ್ನು ಇಂಥಹ ಮಳೆಯ ನೀರಿನ ಸಂಗ್ರಹದಿಂದಲೇ ಪೂರೈಸಿಕೊಳ್ಳಲಾಗುತ್ತದೆ. ಪಶ್ಚಿಮ ಬಂಗಾಳದ ೮೪೦ ಹಳ್ಳಿಗಳಲ್ಲಿ ಲಕ್ಷಾಂತರ ಜನರು ಅರ್ಸನಿಕ್ ವಿಷ ಪ್ರಾಶನದಿಂದ ನರಳುತ್ತಿದ್ದಾರೆ. ನೆಲದಾಳದಲ್ಲಿರುವ ಕಬ್ಬಿಣದ ಪೈರೈಟ್ಗಳು ಕೊಳವೆ ಭಾವಿಗಳ ಮೂಲಕ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ಅಪಾಯಕಾರಿಯಾದ ಆರ್ಸನಿಕ್ ಬಿಡುಗಡೆ ಹೊಂದಿ ಅಂತರ್ಜಲವನ್ನು ಸೇರುತ್ತದೆ. ನೀರಿನೊಂದಿಗೆ ಸೇರುವ ಈ ಆರ್ಸೆನಿಕ್ ಮನುಷ್ಯರಿಗೂ, ಪ್ರಾಣಿಗಳಿಗೂ ಅತ್ಯಂತ ಅಪಾಯಕಾರಿಯಾಗಿದೆ.
ಸಾಮಾನ್ಯವಾಗಿ ಇಂತಹ ಸಮಸ್ಯಗಳಿಗೆ ಸರಳವಾದ ಸುಲಭವಾದ ಮತ್ತು ಕಡಿಮೆ ಖರ್ಚಿನ ಮಾರ್ಗಗಳಿವೆ. ಆದರೆ ಹಲವಾರು ಕಾರಣಗಳಿಂದಾಗಿ ಇಂಥಹ ಪರ್ಯಾಯ ವ್ಯವಸ್ಥೆಗೆ ಒಪ್ಪಿಗೆ ಸಿಗುವುದಿಲ್ಲ ಮುಖ್ಯವಾಗಿ ಮಳೆ ನೀರನ್ನು ಸಂಗ್ರಹಿಸಿ ಇರುವುದು. ಜಲಮೂಲಗಳಿಂದ ನೀರನ್ನು ಪಡೆಯುವುದು. ಮುಂತಾದ ಕ್ರಮಗಳನ್ನು ಅನುಸರಿಸಬೇಕಿದೆ.
*****



















