ಓಡಿ ಓಡಿ ಸುಸ್ತಾದೆ
ಕ್ಯಾಲೆಂಡರ್ ಹಿಂದೆ
ಓಡಿ ಕಡೆಗೆ ಮುಗ್ಗುರ್‍ಸ್ ಬಿದ್ದೆ
ಗಡಿಯಾರದ ಹಿಂದೆ

ಓಡಿ ಓಡಿ ದುಡ್ಡು ಕಂಡೆ
ಇನ್ನೂ ಬೇಕು ಸಿಕ್ಕರೆ
ಜೊತೆಗೆ ಎಲ್ಲೊ ಬೋನಸ್ ಉಂಡೆ
ಬಾಡಿ ತುಂಬ ಸಕ್ಕರೆ

ಓಡಿ ಓಡಿ ಶಿಖರವ ಕಂಡೆ
ನಾನೆ ಮೊದಲಿಗನೆಂದೆ
ಅಲ್ಲಿ ಮಾತಿಗೆ ಯಾರೂ ಇಲ್ಲ
ತಳ ಹುಡುಕಿ ಬಂದೆ

ಓಡಿ ಓಡಿ ಸಾಧಿಸಿ ಬಿಟ್ಟೆ
ವರ್ಷದಲೆ ನೂರ್ ವರ್ಷ
ಜೊತೆಗೆ ಆಯಸ್ಸು ಏನಾಯ್ತೇನೊ
ಹರ್ಷಕೆ ಎಲ್ಲಿ ವರ್ಷ?

ಓಡಿ ಓಡಿ ಬಾಡಿ ಹೋಯ್ತು
ಗಾಡಿ ಆಯ್ತು ಬಾಡಿ
ಇನ್ನು ಎಲ್ಲಿ ಹಳೆ ಕಿಮ್ಮತ್ತು
ಎಲ್ಲರಿಗೂ ನಾ ರಾಡಿ!
*****