Home / ಕವನ / ಕವಿತೆ / ಯಿಸ್ಸಾಮಿತ್ರ ರತ್ನ

ಯಿಸ್ಸಾಮಿತ್ರ ರತ್ನ

ಲೋಕ ಸುಂಕೆ ಕೆಟ್ಟೋಗೈತೆ !
ಪೂರ ! ತುಂಬ! ಬಾಳ !
ಬೂತಗೊಳ್ ಯಿಗ್ತ ಕುಣದ್ರೆ- ಅದೊ!
ದೆಯ್ಗೊಳ್ ಆಕೊ ತಾಳ! ೧

ದುಡ್ಡಿಗ್ ಕಚ್ಚು ವೊಟ್ಟೇಗಿಚ್ಚು
ಏನ್ ಎಂಗ್ ಎಚ್ಕೊಂಡೈತೆ!
ಸುಕ ಸಾಂತಿ ತ್ರುಪ್ತಿ ಎಲ್ಕು
ಬಾಗಿಲ್ ಮುಚ್ಕೊಂಡೈತೆ! ೨

ಐಕುಂಟ್ದ್ ಅಪ್ನಂಗ್ ಇದ್ ನಂ ದೇಸ
ಈಗ್ ಎಂಗೈತೆ ನೋಡು!
ಕಟಕರ್ ಕೋಣೆ! ನರಕಕ್ ಆಪ್ಪ!
ಬದಿಕಿರೋರ್ ಸುಡಗಾಡು! ೩

ಮುನ್ನೂರ್ ಮುವ್ವತ್ ಕೋಟಿ ದೇವ್ರೂ
ಸುಂಕೆ ಕುಂತ್ಕಂಡೌರೆ!
ನರಳೋರ್ ಗೋಳ್ಗೆ ಕಿವಿ ಮುಚ್ಕೊಂಡಿ
ಸತ್ತಂಗ್ ಬಿದ್ಕೊಂಡೌರೆ! ೪

ದೇವ್ರಂತ್ ಅನ್ನೋ ದೊಡ್ ಯೆಸರ್‌ ಬೇಕು-
ಪದವಿ ಸಂಬ್ಳ ಬೇಕು;
ಕಟ್ಕೊಂಡ್ ಕೆಲಸ ಮಾಡ್ದಿದ್ರೂನೆ-
ಆಹ! ಏನ್ ನಿಂ ಜೋಕು! ೫

ದೇವ್ರು ಗಿವ್ರು ಅನ್ಕೊಂಡ್ ಇದ್ರೆ
ನಮಗ್ ಈಗ್ ಉದ್ದಾರ್ ಇಲ್ಲ!
ದೇವ್ರಿಗೆ ದೇವ್ರೆ! ನಮಗೇ ನಾವೇ!
ಬೆಳದವರ್ ಪಾಲಿಗ್ ಬೆಲ್ಲ! ೬

ಬದಕ್‌ಬೇಕಂದ್ರೆ-ಈ ಲೋಕ್ದಿಂದ
ಬಚಾವ್ ಆಗ್ಬೇಕ್ ತುರ್‍ತು;
ನಮ್ದೆ ಲೋಕ ವುಟ್ಟಿಸ್ಕೊ ಬೇಕು
ಈ ಲೋಕಾನೆ ಮರ್‍ತು! ೭

‘ಇನ್ನೊಬ್ಬ್ ಇಂದ್ರನ್ ಕರಿಸ್ತೀನಿ’
ಅಂದಂಗ್ ಯಿಸ್ಸಾಮಿತ್ರ-
‘ನನ್ದೇ ಲೋಕ ಕಟ್ಕೋಂತೀನಿ’
ಅನ್ನೊದ್ ರತ್ನನ್ ಅತ್ರ! ೮
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...