ಕಣ್ಣು

ಮೊಕ್ಕ್ ಎಳ್ಡು ಕಣ್ಣಾದ್ರೆ ಮನಸೀಗೆ ಒಂದೆ!
ಮನಸೀನ್ ಒಂದರ್ ಮುಂದೆ ಎಳ್ಡೂನೆ ಬಂದೆ!
ಇಲ್ದಿದ್ರೂ, ಚೆಂದೆ!
ಲೋಕಾನ್ ವುಟ್ಟಿಸ್ತಿದ್ರೆ ಮನಸೀನ್ ಒಂದ್ ಕಣ್ಣು
ಲೋಕಾನ್ ಆಳ್‌ಮಾಡ್ತೈತೆ ಒರಗಿನ ಎಲ್ಡ್ ಕಣ್ಣು!
ಮೊಕದಾಗಿನ್ ವುಣ್ಣು! ೧

‘ಸಿಕ್ದಂಗ್ ಒರ್‍ಣಿಸ್ತಾರ ಈ ಕುಡದೋನ್ ಎಣ್ಣ?
ಯೋಳಾಕ್ ಏನಂತೀಗ? ಬರಿ ಮಾತಿನ್ ಬಣ್ಣ!’
ಅನ್ನೋನ್ ಕಣ್ ಸಣ್ಣ!
ನೀ ಸಿಗಿಯೋ ಕಬ್ಬನಕ ಮುಕ್ಕಾಲ್ವ ಮಣ್ಣ?
ನಡವೆ ‘ಥು’ ಅಂತಾಚೆ ಉಗದಾಕ್ಸ್ನೆ ಗಿಣ್ಣ
ಕಬ್ ಸೀ ಅಲ್ವಾಣ್ಣ? ೨

ಸರಿಯಾಗಿ ನೋಡ್ಬೇಕು ಅಂತಂದ್ರೆ ಯೆಣ್ಗೆ
ರೆಪ್ಪೇ ಪರದೇನಾಕಿ ಮುಚ್ಬೇಕು ಕಣ್ಗೆ!
ಒರಗಿನ್ ನಿನ್ ಕಣ್ಗೆ!
ಮನಸಿನ ಕಣ್ಮುಂದೆ ಔಳ್ ಅರ್‍ತ ಪೂರ್‍ತಿ!
ಮನದ ಕಣ್ಗ್ ಅಂದ್ರ್ ಔಳೆ ಆರಾದ್ಯಮೂರ್‍ತಿ!
ಅದಕೆ ಮನಕ್ಕ್ ಅರ್‍ತಿ! ೩
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆದಿಕವಿ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…