ಪಾತ್ರೆ ತೊಳೆಯುವ ಯಂತ್ರವು ಸ್ವಯಂ ಚಾಲಿತವಾಗಿ ಪಾತ್ರೆಗಳನ್ನು ತೊಳೆಯುತ್ತದೆ ಮತ್ತು ಒಣಗಿಸುತ್ತದೆ. ಕರ್ರಗಿರುವ ಕೊಳೆ ನಿವಾರಕಗಳನ್ನೂಳಗೊಂಡ ಬಿಸಿ ನೀರು ಅವುಗಳನ್ನು ತೊಳೆಯುತ್ತದೆ. ತೊಳೆದಾದ ಮೇಲೆ ಶುದ್ದವಾದ ನೀರಿನಲ್ಲಿ ಪಾತ್ರೆಗಳನ್ನು ಅದ್ದಿ ನಂತರ ಬಿಸಿಗಾಳಿಯಿಂದ ಒಣಗಿಸುತ್ತದೆ.
ದೊಡ್ಡ ಮನೆಗಳು, ಹೊಟೆಲ್ಲುಗಳು, ಮದುವೆ, ಇತರೆ ದೊಡ್ಡ ಕಾರ್‍ಯಕ್ರಮಗಳಲ್ಲಿ ಊಟದ ನಂತರ ಬಹಳ ಪಾತ್ರೆಗಳು ಕೊಳೆಯಾಗಿ ಸಂಗ್ರಹವಾಗುತ್ತವೆ. ಇಂಥಹ ಪಾತ್ರೆಗಳನ್ನು ಕನ್ವೇಯರ್‌ಬೆಲ್ಟ್, ಅಥವಾ ತಿರುಗುವ ಬುಟ್ಟಿಯ ಸಹಾಯದಿಂದ ಬಿಸಿನೀರಿನ ಕಾರಂಜಿಯಲ್ಲಿ ಮಲೀನ ಪಾತ್ರೆಗಳನ್ನು ಹಾಯಿಸುವ ತತ್ವದ ಮೇಲೆ ಇವು ಕೆಲಸ ಮಾಡುತ್ತವೆ. ಆಧುನಿಕ ಪಾತ್ರೆತೊಳೆಯುವ ಯಂತ್ರಗಳು ಈ ಕ್ರಮವನ್ನು ತಿರುವು ಮರವು ಮಾಡಿದೆ. ಒಂದೇಕಡೆ ಇಟ್ಟಿರುವ ಪಾತ್ರೆಗಳನ್ನು ಕೆಳಗೆ ಮತ್ತು ಮೇಲೆ ಸುತ್ತುವ ಕಾರಂಜಿಗಳು ತೊಳೆಯುತ್ತವೆ.
*****