ನಂ ಬೋಜ ಮುನಿಯ

ಯಿಂದ್ ಒಬ್ಬ ರಾಜ್ ಇದ್ದ – ಬೊಜಾಂತ್ ಔನೆಸರು;
ಔನ್ ಮುಂದೇನ್ ಈ ಈಗ್ನೋರು- ಪನ್ನೀರ್ ಮುಂದೆ ಕೆಸರು!
ಔನತ್ರ ಯಾರಾನ ಆಡೀದ್ರ್ ಬಂದ್ ಪಕ್ಸ-
ಕೊಡ್ತಿದ್ನಂತ್ ತಕ್ಕೋಂತ ಆಕ್ಸರಕೊಂದ್ ಲಕ್ಷ! ೧

ನಾನೂನೆ ಆಡ್ತೀನಿ ಏರ್‍ದಾಗ ಮತ್ತು!
ನನ್ ಆಡಿನ್ ಜೋಕಂದ್ರೆ, ಬೇವಾರ್‍ಸಿಗ್ ಗೊತ್ತು!
ನನ್ ಆಡಗೊಳ್ ಪಸಂದ್ಗೆ ಗೆಣೆಯ ಬೇವಾರ್‍ಸಿ
ಯೆಂಡ ಕುಡದೋನಿಂದೆ ಅಲೆಯೋದೆ ಸಾಕ್ಸಿ! ೨

ನಮಗೇನ್ ಬೇಕಿಲ್ಲಾಣ್ಣ ಅಕ್ಸರ್‌ಕ್ ಒಂದ್ ಲಕ್ಸ!
ಒಂದ್ ಕಾಸ್ ಬುಡಬೇಕಲ್ಲ ಮುನಿಯಣ್ಣನ್ ಬೊಕ್ಸ!
ಅದಕೂ ಬೇಡಾಂತಂದ್ರೆ ಅಳತೆ ಬುಡುವಾಗ
ತೊಟ್ಟಿಚ್ಗೆ ಬುಡತಂದ್ರೆ ಮುರಕ ಮನೆಯಾಗ? ೩

ಮುನಿಯಣ್ಣಂಗ್ ಏನ್ ಗೊತ್ತು ನನ್ ಪದಗೊಳ್ ಸೋಕು!
ಯೆಂಡದ್ ಪದಗೊಳ್ನೂವೆ ತಿಳಿಯೋದ್ಕು ಬೇಕು!
ಈಚ್ಲೆಂಡದ್ ಸೀ ಕಂಡ್ರೆ ಪೀಪಾಯ್ ಒಂದ್ ಪಕ್ಸ-
ಬಿರಕ್ ಬುಟ್ರೂ ಬುಟ್ಟಾತು ಮುನಿಯಣ್ಣನ್ ಬೋಕ್ಸ! ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃತಿ
Next post ತುಂಟಾಟದ ಕವಿ ಎಚ್‌.ಎಸ್‌.ಬಿಳಿಗಿರಿ

ಸಣ್ಣ ಕತೆ

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಏಡಿರಾಜ

  ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…