ಮುದ್ದು ಕಂದನ ವಚನಗಳು : ಒಂದು

ದೇವರು
ರಾಮಕೃಷ್ಣರೆ ಇರಲಿ ಹನುಮ ಗಣಪರೆ ಇರಲಿ
ಎಲ್ಲರೆಲ್ಲರಿಗೆಲ್ಲ ಒಬ್ಬ ತಂದೆ
ಲಕುಮಿ ಪಾರ್ವತಿ ಇರಲಿ, ದುರ್ಗೆ ಸರಸತಿ ಇರಲಿ
ವಿಶ್ವಕ್ಕೆ ಒಬ್ಬನೇ ಮುದ್ದುಕಂದ

ಸಂಸಾರ
ಮಡದಿ ಮಕ್ಕಳ ಬಿಟ್ಟು ಗುಡ್ಡಗವಿಯನೆ ಹೊಕ್ಕು
ತಪ್ಪಲನು ತಿಂದಾಗ ಯೋಗವಲ್ಲ
ಮಕ್ಕಳೊಂದಿಗೆ ಯೋಗ ಮಡದಿಯೊಂದಿಗೆ ಯೋಗ
ಮನೆಯಲ್ಲಿ ಶಿವಯೋಗ ಮುದ್ದುಕಂದ

ಸಮರ್‍ಥ
ವೇಸ್ಟು ಎಂಬುದನೆಲ್ಲ ಬೆನ್ನು ಮಾಡೈ ಕಂದ
ವ್ಯರ್ಥದಲಿ ಸಮರ್‍ಥ ಶಕ್ತಿ ತುಂಬು
ಹಳೆಯ ಕೊಳೆಯನು ಕಳೆದು ಕೊಳಚೆ ಕತ್ತಲೆ ತೊಳೆದು
ಆಗು ನೀ ಸಿದ್ಧಾರ್ಥ ಮುದ್ದುಕಂದ

ಊಟ
ಕಟಗರೊಟ್ಟಿಯು ಹೋತು ನಟ್ಟು ಕಡಿವುದು ಹೋತು
ಘೀರೈಸು ಇಡ್ಲಿಗಳ ಪ್ಲೇಟು ಬಂತು
ಬಿಸಿಲಾಗ ಅಂಬ್ರೇಲಾ ಚಳಿಯಾಗ ಮಫ್ಲರು
ಮೂಗು ಗಂಗಾನದಿಯು ಮುದ್ದುಕಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಧುನಿಕ ಅಹಲ್ಯೆಯರು
Next post ಕಾವ ಬೆಳೆಯೆಂದಾವ ಬೆಳೆಯನಾಯ್ದುಕೊಳ್ಳಲಿ?

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys