ತಾಯ ಮಡಿಲು

ಹಕ್ಕಿ ಹಾರತೊಡಗಿತು
ಚುಕ್ಕಿ ಮೂಡತೊಡಗಿತು ||
ಸೂರ್‍ಯ ಮುಳಗತೊಡಗಿದ
ಬಾನ ಚಂದ್ರ ಮೂಡಿ ಬೆಳಕ ಚೆಲ್ಲಿ
ಜಗಕೆ ತಂಪ ನೀಡಿದ || ಹ ||

ಬೆವರ ಸುರಿಸಿ ಕಷ್ಟ ಸಹಿಸಿ |
ರೆಟ್ಟೆ ಮುರಿದು ಕಟ್ಟೆ ಹೊಡೆದು ||
ನೇಗಿಲ ಹೊತ್ತ ರೈತ ನಡೆದು |
ಗೆಜ್ಜೆ ಕಟ್ಟಿದಾ ಎತ್ತ ಹೊಡೆದು |
ಹೆಜ್ಜೆ ಹಾಕತೊಡಗಿದ || ಹ ||

ಅಂಗನೆ ದೀಪ ಹಚ್ಚುವಲ್ಲಿ |
ತಾರೆ ಮಿನುಗಿ ಮಿನುಗ ಚಲ್ಲಿ ||
ಗಗನ ಕುಸುಮ ಮಿಡಿದು ಹೃದಯ
ಬೆಚ್ಚನೆಯ ಹೊದಿಕೆ ಹಾಸಿ ಉದಯ
ತಾಯಿ ಸೇವೆ ಮಾಡಿದ ತಾಯ ಮಡಿಲ ಸೇರಿದ || ಹ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರ್ಥವಿಲ್ಲದ್ದು
Next post ಬೆಳಕು

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…