ಅರ್ಥವಿಲ್ಲದ್ದು

ಆಚಾರ ಹೀನನ ಮಾತು ಅರ್ಥವಿಲ್ಲದು
ಅದನು ನಂಬಿ ಅವನನ್ನ ಅನುಸರಿಸದಿರು
ಆಯ್ದುಕೊ ನಿತ್ಯವೂ ಸ್ವಾರ್ಥವಿಲ್ಲದು
ನಿನ್ನ ಬದುಕು ದೊಂಬರಾಟ ಮಾಡದಿರು

ಒಂದೊಂದು ಕ್ಷಣದಲ್ಲೂ ವ್ಯಾಕುಲತೆ ಇರಲಿ
ಅದು ದೇವರಿಗಾಗಿ ಚಡಪಡಿಕೆ ಇರಲಿ
ಹಗಲಿರುಳು ಧ್ಯಾನಿಸು ಬರೀ ಧ್ಯಾನಿಸು
ಅಲ್ಲಿ ಕಾಣು ಬರೀ ಹರಿಯದೇ ಕನಸು

ಐಹಿಕ ಸುಖಗಳೆಲ್ಲ ಕ್ಷಣದ ತೃಪ್ತಿ
ಆತ್ಮ ಸಾಕ್ಷಾತ್ಕಾರ ನಿತ್ಯ ಸಂತೃಪ್ತಿ
ಒಮ್ಮೆ ಪರಮಾತ್ಮನ ದರ್ಶನವಾದರೂ
ಕೋಟಿ ಜನುಮಗಳ ಪಾಪದೂರ

ಆತ್ಮ ಹಾಕಿದ ಹೆಜ್ಜೆಗೆ ಹಿಂಬಾಲಿಸು
ಶುದ್ಧ ಮನಸ್ಸು ಆತ್ಮದ ಛಾಯೆ
ಸತಿ ಸುತ ಆಸೆಗಳ ಮನದಿಂದಮಾಸು
ಮಾಣಿಕ್ಯ ವಿಠಲನಿಗೆ ಭಾವಹಾಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫೩
Next post ತಾಯ ಮಡಿಲು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…