ಹಿಂದ ಓಕೆ ಸಾಬರ (ಅ) ಉಸಾಬರಿ ಎಲ್ಲಾ ಯಾಕೆ?

ಅಹಿಂದ ಯಾಲಿ ಯಾವ ಸೀಮೆಯಾಗ ನೆಡೆದ್ರೂ ರಗ್ಗಡ ಮಂದಿ ಸೇರೋದನ್ನ ನೋಡಿ ಗೋಡ ಅಂಡ್ ಹಿಸ್ ಸನ್ಸ್ಗಳಿಗೆ ತೆಳ್ಳಗೆ ಮೋಷನ್ ಸ್ಟಾರ್ಟ್ ಆಗಿರೋದು ನ್ಯಾಚುರಲ್
ಎಫೆಕ್ಟ್ ಬಿಡ್ರಿ. ಕಾಂಗ್ರೆಸ್‌ನವ್ಕೂ ಒಂತರಾ ಬ್ರೇನ್ ಫೀವರ್ರು. ಅಹಿಂದ ನುಂಗಲಾರದೆ; ನುಂಗದೆ ಇರಲಾರದೆ ನಳ್ಳೋ ಪರಿಸ್ಥಿತಿ. ಬಿಜೆಪಿಯೋವ್ಕೆ ಅಯೋಮಯ! ಕೇಂದ್ರದಿಂದ ಆಂಟನಿ ಬಂದ್ರೂ, ಹೈಕಮಾಂಡೇ ‘ಹೋಗಬ್ಯಾಡ್ರಲಾ’ ಅಂತ ಕಮ್ಯಾಂಡ್ ಮಾಡಿದ್ರೂ ಹೋಗಾದೇ ಸೈ ಅಂತ ಕ್ಯಾಪಿಟೇಶನ್ ಕಳ್ಳ ಜಾಲಪ್ಪ, ಇಸ್ವನಾತು ಪರಮೇಶಿ ಅಂತೋರು ಕೇರೆ ಮಾಡ್ತಿಲ್ಲ. ಜೋರಾಗಿ ಅಪೋಸ್ ಮಾಡಿದ್ರೆ ಅಹಿಂದಗಳು ಸಿಟ್ಟಿಗೆದ್ದು ಟುಮಾರೋ ಕಾಂಗ್ರೆಸ್ಸಿಗೆ ಓಟೇ ಹಾಕದಿದ್ರೆ ಮತ್ತೆ ವನವಾಸಕ್ಕೇ ಹೋಗಬೇಕಾಗ್ತದಂತ ದಿಗಿಲುಗೊಂಡ ಮುದಿ ತಲೆಗಳಿಗೆ ಮೈಗ್ರೇನ್ ತಲಿಬ್ಯಾನಿ ವಕ್ಕರಿಸಿಕ್ಕಂಡದೆ. ಜೆಡಿ‌ಎಸ್‌ನೋರೂ ನೆಕ್ಟ್‌ವೀಕ್ ಅದೇ ತುಮ್ಕೂರಾಗೆ ಅದೇ
ಪ್ಲೇಸ್‌ನಾಗೆ ನಾವೂ ಸಮಾವೇಸ ಮಾಡ್ಕತೀವಿ ಅಂತ ಸ್ಕೆಚ್ ಹಾಕೋರೆ. ಹಂಗಾರ ಮಾಡಿ ಅಹಿಂದ ಒಗ್ಗಟ್ಟು ಮುರಿಯೋ ಮಸಲತ್ತು ನೆಡದೇತೆ. ಬಿಜೆಪಿನೋರ್ಗೆ ಫುಲ್‌ಮೀಲ್ಸ್‌ಗೆ ಗೋಮಾಳ್ಗೆನಾಗೆ ಇಳಿದಂಗಾಗಿ ನಾವು ಹಿಂದುಳಿದೋನ ಸಾಬನ ಮಿಕ್ಸ್ ಮಾಡಿ ಯಾಲಿ ಮಾಡ್ತೀವ್ರಿ. ನಮ್ಗೆ ಮಾತ್ರ ದೀನದಲಿತರ ಬಗ್ಗೆ ಕೈಂಡ್ ಹಾರ್ಟ್ ಇಲ್ವೇನ್ರಿ ಅಂತ ಕೂಗುಮಾರಿ ಯಡೂರಿಯಂತೂ ಕೂಗಿದ್ದೂ ಕೂಗಿದ್ದೆ. ಜೆಡಿಯುನ ಒಂಟಿ ಪಕ್ಸಿ ಸೋಮಸೇಕ್ರುಗೆ ಯಾಲಿಮಾಡೋ ತಾಕತ್ತಿಲ್ಲ. ಅದ್ಕೆ ಜಾತಿ ಹೆಸರ್ನಾಗೆ ಸಮಾವೇಶ ಮಾಡೋದು ಕೂಡ ಅಸಂವಿಧಾನಾತ್ಮಕ, ಜಾತಿ ಮಧ್ಯೆ ಒಡ್ಕು ತಂದಿಡೋ ಯಾಲಿನಾ ಬೈಕಾಟ್ ಮಾಡ್ತೀನಿ. ಯಾಲಿ ಯಾಲಿ ಅಂತ ಹುಚ್ಚು ಪ್ಯಾಲಿಗಳಂಗೆ ಆಡೋ ಬದ್ಲು ಸಿದ್ದು ಆಂಡ್ ಪಾರ್ಟಿ ನಮ್ಮ ಪಾರ್ಟಿಗೆ ಬರ್ಲಿ ಅಂತ ತೋಡಿರಾಗ ಹಾಡ್ಲಿಕ್ ಹತ್ತಾನೆ. ತುಮಕೂರಿನಾಗೆ ನಡ್ದ ಅಹಿಂದ ಯಾಲಿಗೆ ಸೇರಿದ ಜನ ಜಾತ್ರೆ ನೋಡಿ ಪಕ್ಷಗಳ ಓಲ್ಡ್ ಖಾದಿಗಳಿಗೆ ಎದೆಬಡಿತ ರೈಸ್ ಆಗಿದ್ರಾಗೆ ವಂಡರ್ ಏನಿಲ್ಲ ಬಿಡ್ರಿ. ಆದರೆ ಈ ಘಟ್ಟದ ತಗ್ಗಿನ ಸ್ವಾಮಿಗೆ ವಾಟರ್ ಡಯೇರಿಯಾ ಸ್ಟಾರ್ಟ್ ಆಗಿದೆ
ಅಂಬೋ ನ್ಯೂಸ್ ಕಿವಿಗೆ ಬೀಳುತ್ಲು ಜೀವಕ್ಕೆ ಹೆಂಗೆಂಗೋ ಆತು. ಹಿಂದು ಒಕೆ ಅಲ್ಲಿ ‘ಆ’ ಯಾಕೆ ಅಂತ ಸ್ವಾಮಿಗಳು ನಿತ್ರಾಣದಾಗೂ ಬಡಬಡಿಸ್ತಾ ಅವರೆ ಅನ್ನೋ ಬ್ಯಾಡ್ ನ್ಯೂಸ್ ಉಡುಪಿ ಕಡೆಯಿಂದ್ಲೆ ಬಂದಾಗ್ಲಂತೂ ಅವರ ಹೆಲ್ತ್ ಕಂಡೀಷನ್ ಬಗ್ಗೆ ಇಚಾರಿಸ್ಕೊಂಡು ಬರೆದಿದ್ದ ಮ್ಯಾಗೆ ಪತ್ರಕರ್ತನಾಗಿ ಉಪೇಗ ಅಂತೇಳಿದ್ದೆ ನೋಟ್‌ಬುಕ್ ಸಮೇತ ಬ್ಯಾಗ್ ಹೆಗಲಿಗೇರಿಸಿ ಬಸ್ ಹತ್ತೇಬಿಟ್ಟೆ.

ಅಷ್ಟಮಠಗಳ ಅಡ್ಡೆನಾಗೆ ಮುದ್ರೆಯವನೊಬ್ಬ ಎದುರ್ನಾಗ್ ಬಂದ. ‘ಹೋಯ್ ನಮಸ್ಕಾರ ಮಾರಾಯ್ರೆ ಪೇಜಾವರ ಶ್ರೀಗಳು ಹೆಂಗವರೆ’ ಆತುರ್ದಾಗೆ ಇಚಾರಿಸ್ದೆ. ‘ಮೊದಲು ಹೆಂಗಿದ್ದರೋ ಹಂಗೆ ಉಂಟಲ್ಲೋ. ಅದೇ ನರಪೇತಲ ಬಾಡಿ. ಅವರು ಈ ಜನ್ಮದಲ್ಲಿ ನಮ್ಮಂಗಾಗ್ಲಿಕ್ಕುಂಟಾ’ ಎಂದ ಧಡಿಯ ಹೊಟ್ಟೆ ಸವರಿಕೊಂಡು. ‘ಅದಿಲಿ ರಾಯ್ರೆ, ಶ್ರೀಗಳಿಗೆ ತುಂಬಾ ಡಿಸೆಂಟ್ರಿ ಆಗಿ ಬ್ಯಾಡ್ ಕಂಡೀಷನ್ ಅಂತ ಕೇಳಿಬಂದೀನಿ. ಶ್ರೀಗಳು ಯಾವ ದವಾಖಾನೆಗೆ ಅಡ್ಮಿಟ್ ಆಗ್ಯಾರ್ರಿ?,
ಕೇಳಿದೆ. ‘ಗೊತ್ತಿಲ್ಲವೋ! ಹೌದ್ರಾ?’ ನನ್ನೇ ಪ್ರಶ್ನಿಸಿದ. ಮಠದಿಂದ ಒಬ್ಬ ಮರಿಕಾವಿ ಹೊರಾಗ್ ಬಂದ. ಅವನತ್ತ ಓಡಿದೆ. ‘ದೂರದೂರ’ ಅಂತ ಅವನೇ ದೂರ ಹೋದ. ಬಂದ ವಿಷಯ ಅರಿಕೆ ಮಾಡಿದೆ. ‘ಪೇಪರ್ ಮಂದಿಗಂತೂ ಸಧ್ಯಕ್ಕೆ ಪ್ರವೇಶವಿಲ್ಲ’ ಅನ್ನಬೇಕೆ. ‘ಅಯ್ ಯಡೂರಪ್ನೋರು ಕಳಿಸಿದ್ರು ಕಣ್ರಿ ತುಂಬಾ ಕಾನ್ಫಿಡೆನ್ಶಿಯಲ್ ಮ್ಯಾಟ್ರು’ ಅಂತ ಭೋಂಗುಬಿಟ್ಟೆ. ತಟ್ಟನೆ ಒಳಗೆ ಬಿಟ್ಟ. ಪೇಜಾವರರು ಅಂಗಾತ ಮಲಗವರೆ. ಸಪ್ಪೆದಂಟಿನಂತ ಕೈಗೆ ಹಾಕಿದ ಡ್ರಿಪ್‌ನಿಂದ ಹನಿಹನಿಯಾಗಿ ಗ್ಲೂಕೋಸ್ ತೊಟ್ಟಿಕ್ ಹತ್ತದೆ. ಗಾಬರಾತು ಪುಟ್ಟರಿಗೆ ಪ್ರಮಾಣಗಳು ಅಂದೆ. ಶ್ರೀಗಳ ಎದುರು ಪಾರಾಯಣ ಮಾಡುತ್ತಿದ್ದ ಬನ್ನಂಜೆ ಕೆಂಗಣ್ಣು ಬಿಟ್ಟು, ‘ಯಾರ್ರಿ ನೀವು?’ ಅನ್ನಬೇಕೆ. ‘ಪೇಪರ್ನೋರು ಕಂಡ್ರಿ ಅಯ್ನೋರಾ’ ಅಂದೆ ತಕ್ಷಣ ಸರಕ್ಕನೆ ಪಕ್ಕಕ್ಕೆ ಕತ್ತು ತಿರುವಿದ ಪ್ರಚಾರ ಪ್ರಿಯ ಪೇಜಾವರ ಕ್ಷೀಣನಗೆ ಚೆಲ್ಲಿದರು. ‘ಯಾವ ಪೇಪರ್ನವರು?’ ಅಂದರು. ‘ಲಂಕೇಶ್ ಪತ್ರಿಕೆ ಸಂಪಾದಕರು ಕಳಿಸ್ಯಾರ್ರಿ. ತಮ್ಮ ಆರೋಗ್ಯದ ಬಗ್ಗೆ ಭಾಳ ಕಾಳಜಿ ಐತ್ ನೋಡ್ರಿ ಅವರ್ಗೆ’ ಬೆಣ್ಣೆ ಹಚ್ಚಿದೆ. ‘ಕೊತ್ಕೊಳ್ರಿ’ ಅಪ್ಪಣೆ ಆತು. ‘ಈಗ ಹೆಂಗಿದ್ದೀರಿ?’ ಒಂದಿಷ್ಟು ಸುಸ್ತು ಅಂದರು. ‘ಯಾಕಿಂಗೆ ಸಡನ್ನಾಗೆ ಆತು ಬುದ್ಧಿ?’ ವಿಚಾರಿಸಿದೆ. ‘ಮನುಷ್ಯನಿಗಲ್ದೆ ಕಾಯಿಲೆಗಳು ಮರಕ್ಕೆ ಬರುತ್ತೇನ್ರಿ?’ ಬನ್ನಂಜೆ ಸಿಡುಕಿತು. ಬರ್ತದ್ರಿ ಮರಕ್ಕೂ ಗೆದ್ಲು ಹಿಡಿತಾವು ನುಸಿಪೀಡೆ ರೋಗ ಅಂತ ಬಂದದೆ ಕೇಳಿರಿಲ್ಲೋ. “ನೀವು ಸುಮ್ಗಿರಿ ಆಚಾರ್ಯರೆ, ಬಂದ ವಿಷಯ ಹೇಳಿ?” ನರಳುತ್ತ ನನ್ನತ್ತ ನೋಡಿದರು ಶ್ರೀಗಳು. ‘ಅದೇ ದೇವ್ರು, ಕರುನಾಡ ತುಂಬಾ ಅಹಿಂದ ಯಾಲಿ ನಡಿಲಿಕತ್ತದೆ ಆ ಬಗ್ಗೆ ತಮ್ಮ ನಿಲುವು?’ ಹೊಯ್ ನಿಮ್ಮ ಪೇಪರ್ ಮಾತ್ರ ನೀವು ಓತ್ತೀರಾ? ಢೈಲಿ ನ್ಯೂಸ್ ಪೇಪರ್ ಓದಲ್ವೇನ್ರಿ? ಗದರಿಕೊಂಡರು. ‘ಓದೀನ್ರ. ಹಿಂದ ಓಕ ಸಾಬರ ಉಸಾಬರಿ ಯಾಕೆ ಅಂತ ಹೇಳಿರ್ರಿ.’ ‘ಹೇಳ್ತೀನ್ನಿ ಬಿಡ್ತೀನಾ. ದಲಿತರು ಹಿಂದುಗಳ ಜೊತೆಗೆ ಅಲ್ಪಸಂಖ್ಯಾತರನ್ನ ಯಾಕ್ರಿ ಸೇರಿಸಿಕೊಳ್ಳಬೇಕು? ಇದು ಹಿಂದೂ ಸಮುದಾಯವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ಅಲ್ವೇನ್ರಿ. ‘ಹಂಗಾರೆ, ಸಾಬ್ರ ಕಂಡ್ರೆ ನಿಮ್ಗೆ ಆಗೋದಿಲ್ಲ ಅಂದಂಗಾತು?’ ‘ವುಂಟೆ, ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ.’ ‘ಹಾಗೇನಾದ್ರೂ ಬರ್ದಿರಪಾ. ಪೇಪರ್ನೋರು ಶ್ಯಾನೆ ಡೇಂಜರ್ರು’ ನರಳಿದರು. ‘ಹಿಂದೂಗಳೆಲ್ಲಾ ಒಂದಾಗಿ, ಹಕ್ಕುಗಳಿಗಾಗಿ ಹೋರಾಟ ಮಾಡ್ಲಿ. ಅದಕ್ಕೆ ನಮ್ಮ ಬೆಂಬಲ ಇದೆ. ಆದರೆ ಹಿಂದೊಗಳಲ್ಲೆ ಗುಂಪು ಗುಂಪಾಗಿ ಪಾರ್ಟಿ ಕಟ್ಟಿಕೊಂಡು ರಾಲಿ ಮಾಡೋದು ಅಶುಭ ಎಂದು ಈ ಮೂಲಕ ಎಚ್ಚರಿಸುತ್ತೇನೆ’ ‘ಯಾಕ್ರಿ ಸ್ವಾಮೀಜಿ, ಹಿಂದೂಗಳ ಸಂಗಡ ಸಾಬ್ರು ಸೇರಿದ್ರೇನಾತು?’ ಮುಗ್ಧತೆ ತೋರಿದೆ. ‘ಹುಚ್ಚಪ್ಪಾ ಅವರು ಹೊರಗಿನಿಂದ ಬಂದವರು ಮುಸ್ಲಿಂ ಕಿರಿಸ್ತಾನರಿಗೆ ಬೇರೆ ಕಂಟ್ರೀಸಿವೆ. ನಮಗೆ ಭಾರತ ಬಿಟ್ಟರೆ ಅನ್ಯದೇಶವಿಲ್ಲವೆ.” ಅವರು ಹೊರಗಿನಿಂದ ಬಂದ್ರೂ ಬ್ರಿಟಿಷನೋರಂಗೆ ಸಂಪತ್ತು ಹೊತ್ಕೊಂಡು ಹೋಗಲಿಲಲ್ರಿ. ಇಲ್ಲೇ ರಾಜ್ಯ ಕಟ್ಟಿ ಆಳಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಅವರೊವೆ ಅಗ್ದಿ ಫೈಟ್ ಮಾಡ್ತಾರೆ ಅಂಬೋದ್ನ ತಾವು ಮರೀಬಾರು ಸಿವ. ಸತ್ಯದ ಮಾತಿಗೆ ಬಂದ್ರೆ ಆರ್ಯರೂ ಹೊರಗಿನಿಂದ ಬಂದೋರೆ ಅಲ್ಲವರಾ?’ ಪಿಟಿಂಗಿಟ್ಟೆ’. ‘ಇರಬಹುದು ದೇಶದಲಿ ಉನ್ನತ ಸಂಸ್ಕೃತಿ ಬೆಳೆಸಿದ ಸುಸಂಸ್ಕೃತರಿಗೂ ಸಾಬರಿಗೂ ಹೋಲಿಕೆ ಬೇಡ.’ ‘ಹೌದ್ ಬಿಡ್ರಿ ಮನುಷ್ಯಾರ್ನ ಟಚ್ ಮಾಡ್ದೆ ಅನಿಮಲ್ಸ್ ತರಾ
ಕಾಣೋದೊ ಒಂದು ಸಂಸ್ಕೃತಿನೆ’ ನಕ್ಕೆ. ‘ಅಸಂಬದ್ಧವಾಗಿ ಕೊಳಕರನ್ನ ಯಾರು ಮುಟ್ಟಿಸ್ಕೋತಾರೆ? ಶುಚಿಯಾಗಿರೋದನ್ನ ಕಲೀಲಿ ಎಂದು ಹಾಗೆ ಮಾಡಿದೆವು. ಶುಚಿಯಾಗಿರೋ ನಿಮ್ಮನ್ನ ಕೂರಿಸ್ಕೊಂಡು ಮಾತಾಡ್ತಾ ಇಲ್ವೇನ್ರಿ’ ಹಿಂದು ಒಂದು ಬಂಧು ಅಂತ ನಾವು ಬೊಂಬ್ಡಿ ಹೊಡಿತಿರೋವಾಗ ಅಹಿಂದ ಎಂತಕ್ಕೆ? ಕನಲಿದರು. ‘ತಮ್ಮ ಸ್ಪೇಟ್ ಮೆ೦ಟ್ ನೋಡಿದ ಸಿದ್ರಾಮಯ್ನೋರು ರಾಂಗ್ ಆಗಿ ನಾವು ಭಾರತೀಯರು, ಪೂಜೆ ಪುನಸ್ಕಾರ ಮಾಡೋದು ಬಿಟ್ಟು ಅವರಿಗ್ಯಾಕ್ರಿ ಸಿದ್ರಾಮಾಯಣ’ ಅಂದವರೆ, ‘ಏನೆ ರಾಂಗ್ ಆದ್ರೂ ಆತ ಸಿ‌ಎಂ ಆಗೋದಿಲ್ಲ. ನಾವು ಹರಿಸಿದರೆ ಹಯನ ಮುನಿದರೆ ಪಯನ. ನಮ್ಮ ಆಷ್ಟಮಠಗಳ ಅಡ್ಡೆಗೆ ಕುರುಬರ ಗ್ಯಾಂಗ್
ನುಗ್ಗಿಸಿದ ಆತನ ಗರ್ವಭಂಗ ಆದೀತು ಕನಕ ಮೇಲಿನ ಪ್ರೀತಿಗೆ ಶ್ರೀಕೃಷ್ಟನೇ ಲೆಫ್ಟ್‌ಟರ್ನ್ ಆಗಿ ನಿಂತು ಗೋಡೆ ಬ್ರೇಕ್ ಮಾಡಿ ದರ್ಶನ ಕೊಟ್ಟರೂ ಶತಮಾನಗಳಿಂದ ಕನಕನ್ನ ಹೊರಾಗೆ ನಿಲ್ಲಿಸೀರಿ? ಕನಕನಿಂದ್ಲೆ ಕೃಷ್ಣ ಫೇಮಸಾದ್ರು ಉಡುಪಿನಾಗೆ ಕನಕ ವೃಷ್ಟಿಯಾದ್ದು ಅಂತಾರ್ರಿ ಭಕ್ತಮಹಾಶಯರು. ತಾವೇನಂತೀರಿ?’ ಶ್ರೀಗಳು ಮೂಗುಮ್ಮಾಗಿ ನಕ್ಕರು. ‘ನೋಡಿ, ಗೋಡ್ಸೆಯಿಂದ್ಲೆ ಗಾಂಧಿ ಫೇಮಸ್ ಆಗಿದ್ದು ಅಂತ ನಾ ಹೇಳ್ತೀನಿ ಏನಂತಿರಾ. ಅವನು ಗಾಂಧಿಯನ್ನ ಗುಂಡಿಟ್ಟು ಕೊಂದಿದ್ದರಿಂದ ಗಾಂಧಿಗೆ ಹುತಾತ್ಮ ಪಟ್ಟ ಸಿಕ್ಕಿತಲ್ಲವೋ, ಮಹಾತ್ಮರ ಇಮೇಜ್ ಬಂದಿದ್ದುಂಟಲ್ಲವೋ. ಹೀಗೆ ಆಗದಿದ್ದಲ್ಲಿ ನಮ್ಮ ಜನ ಗಾಂಧಿಯನ್ನು ಮರೆತೇ ಹೋಗೋರು. ಆ ಕಾರಣವಾಗಿ ನಾವು ಗೋಡ್ಸೆಗೆ ಥ್ಯಾಂಕ್ಸ್ ಹೇಳಲಿಕ್ಕೆ ಬೇಕಲ್ಲವೋ?’ ಪ್ರಶ್ನಿಸಿದರು. ‘ಅಗ್ದಿ ಬರೋಬ್ಬರಿ ಮಾತು ಬಿಡ್ರಿ. ಗೋಡ್ಸೆನ ಹಿರೋ ಮಾಡಿ ಬುಕ್ ಬರೆಯೋರು ನಾಟ್ಕ ಮಾಡೋರು ನಮ್ಮ ದೇಸದಾಗೆ ಅವರೆ. ಗೋಡ್ಸೆ ಗೆಣಕಾರ್ರೆ ಐದು ವರ್ಷ ದೇಸಾನೂ ಆಳಿಬಿಟ್ರು. ಈ ದೇಸದ
ನಸೀಬೇ ಹಂಗೈತೆ ಸ್ವಾಮೇರೆ’ ನಿಡುಸುಯೇ ಅಂದಂಗೆ ದೇವಾಲಯಕ್ಕೆ ಸಂಬಂಧಪಟ್ಟಂಗೆ ತಾವೇ ರಿಟ್ ಹಾಕಿ ತಾವೇ ಅರ್ಜಿ ವಾಪಾಸ್ ಪಡ್ಕೊಂಡೀರಿ! ಜಸ್ಟಿಸ್ ನಾಗಮೋಹನದಾಸ್ ಪ್ರಗತಿಪರರು, ಕಮ್ಯುನಿಸ್ಟ್ ಪಾರ್ಟಿನಾಗಿದ್ದೋರು ಅಂಬೋ ಡವಟು ಬಂದು ಕೇಸ್ ಕೈಬಿಟ್ರಿ ಅಂತ್ಲೆ ಸುದ್ದಿ ಹಬ್ಬೇತೆ ಖರೆ ಏನ್ರಿ?’ ಮಾರಿ ನೋಡ್ಡೆ. ಮೌನತಾಳಿದರು ಪೇಜಾವರ. ಆಗಲೆ ನರ್ಸ್ ಬಂದು ಡ್ರಿಪ್ ತೆಗೆದಳು. ಲವಲವಿಕೆಯಿಂದ ಎದ್ದು ಕೂತರು ಮಾಸ್ವಾಮಿಗೋಳು ಪಡ್ಡೆಯಂತೆ ‘ನಮ್ಮ ಉಮಾಭಾರ್ತಿ ಮೇಲೆ ನೀವೆಲ್ಲಾ ಸೇರಿ ಕೇಸ್ ಹಾಕಿದ್ದಿರಲ್ಲ…. ಆದದ್ದೇನು? ಅರ್ಜಿನೇ ವಜಾತು. ಅದನ್ನ ಮಾತ್ರ ನೀವು ಫ್ರಂಟ್ ಪೇಜ್ ನ್ಯೂಸ್ ಮಾಡೋದಿಲ್ಲ’ ಪೇಪರ್ನೋರ
ಆಕ್ಷೇಪಿಸಿದರು. ‘ಕೇಸ್ ಹಾಕಿದ್ದು ನಾವರಲ್ರಿ. ಅಗ್ದಿ ಭಯಂಕರ ಬುದ್ದಿ ಜೀವಿಗಳು ಅಂದೆ. ‘ನಮಗೆ ಹಸಿವಾಗಿದೆ’ ಎಂದರು. ಹಸಿದ ಹಾರವಯ್ಯನ್ನ ತಡವಬಾರ್ದು ಅಂಬೋದು ನೆಪ್ಪಗೆ ಬರುತ್ಲು ಬ್ಯಾಗ್ ಹೆಗಲಿಗೇರಿಸಿ ಮ್ಯಾಕೆದ್ದೆ.
*****
(ಲೋಕೇಶ್ ಪತ್ರಿಕೆ – ದಿ. ೦೭.೦೯.೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಗೂಢ
Next post ಅಕ್ಕ ನೀಲಾಂಬಿಕೆ

ಸಣ್ಣ ಕತೆ

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys