ನಾನು ಮನೆಯ
ಕಸವೆಲ್ಲ ಗುಡಿಸಿ
ಮೂಲೆಗೆ ಕೂಡುವ
ಕಸಪರಿಕೆಯೇ?

ಎಲ್ಲರೂ ದಾಟುತ್ತ
ಇಲ್ಲ, ಕಾಲಿನಿಂದ ಹೊಸಕುತ್ತ
ಮುಂದೆ ಸಾಗುವ
ಮನೆಯ ಹೊಸ್ತಿಲೆ?

ಒಡೆಯನ ಮರ್ಜಿಯಂತೆ
ಬೆಳಕು ಬೇಕೆಂದಾಗ
ಮನೆಗೆ ಬೆಳಕು ಕೊಡುವ
ಬಲ್ಬು ಆಗಿರುವೆನೆ?

ಕತ್ತಲೆ ಹಿನ್ನೆಲೆಯಾಗಿ
ಸೃಷ್ಟಿಯಲ್ಲಿ ಸಮಭಾಗಿ
ಜಗತ್ತಿಗೇ ಬೆಳಕು ಕೊಟ್ಟು
ಕತ್ತಲೆಯಲಿ ಬದುಕುವೆ.

ಒತ್ತು ಗುಂಡಿಯಂತೆ ನಾನು
ಬದುಕೆಲ್ಲ ಒಡೆಯನ
ಮರ್ಜಿ ಕಾಯುವ
ಜೀವವಿಲ್ಲದ ಜಡವಸ್ತುವೆ?
*****