ಕ್ಯಾನ್ಸರ್‌ ನಿರೋಧಕ ಕಾಲಿಪ್ಲವರ್, ಕ್ಯಾಬೇಜ್

ಕ್ಯಾನ್ಸರ್‌ ನಿರೋಧಕ ಕಾಲಿಪ್ಲವರ್, ಕ್ಯಾಬೇಜ್

ಬಹಳಷ್ಟು ಜನ ಮೂತ್ರಕೋಶದ ಮತ್ತು ಕಂಡದ ಕ್ಯಾನ್ಯರಿಗೆ ತುತ್ತಾಗಿ ಬಳಲುತ್ತಿರುವುದನ್ನು ಕಾಣುತ್ತೇವೆ. ಇಂಥವರಿಗೆ ರಾಮಬಾಣವೆಂದರೆ ದಿನನಿತ್ಯದ ಆಹಾರದಲ್ಲಿ ಕಾಲಿಪ್ಲವರ್ ಮತ್ತು ಕ್ಯಾಬೇಜ್‌ಗಳನ್ನು ಹೆಚ್ಚಾಗಿ ಉಪಯೋಗಿಸಿದರೆ ಈ ಕಾಯಿಲೆಯಿಂದ ಗುಣವಾಗ ಬಹುದು ಎಂದು ಬರ್‍ಕ್ಲೆಯ, ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಡುತ್ತಾರೆ.

ಕಾಲಿಪ್ಲವರ್ ಮತ್ತು ಕ್ಯಾಬೆಜ್‌ಗಳಲ್ಲಿ ಇಂಡೋಲ್ (ಇಂಡೋಲ್-೩ ಕಾರ್ಬಿನೊಲ್) ಎಂಬ ರಾಸಾಯನಿಕವಿರುತ್ತದೆ. ಈ ರಾಸಾಯನಿಕಗಳು ಮಾನವನ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ. ಈ ತರಕಾರಿಗಳನ್ನು ಸೇವಿಸಿದಾಗ ಅದರಲ್ಲಿರುವ ಇಂಡೋಲ್ ರಾಸಾಯನಿಕವು ದೇಹದಲ್ಲಿಡಿ ಇಂಡೋ ಲಿಮಿಥೇನ್ ಆಗಿ (DIM) ಪರಿವರ್ತನೆಗೊಳ್ಳುತ್ತದೆ. ಅನಂತರ ಅದು ಕ್ಯಾನ್ಸರ್ ಜೀವಕೋಶದ ಬೆಳವಣಿಗೆ ವಿರುದ್ದ ಆಕ್ರಮಣ ಆರಂಭಿಸುತ್ತದೆ. ದೇಹದಲ್ಲಿ ಆಂಡ್ರೋಜನ್ ಎಂಬ ಹಾರ್ಮೋನಿನ ಶ್ರಾವ ಅಧಿಕವಾಗಿ ಅದರ ಚಟುವಟಿಕೆ ತೀವ್ರವಾದರೆ ಅದು ಮೂತ್ರಕೋಶದ ಕಂಠದ ಗ್ರಂಥಿಯ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ. ಕಾಲಿಪ್ಲವರ್ ಮತ್ತು ಕ್ಯಾಬೆಜ್ ದಲ್ಲಿರುವ ರಾಸಾಯನಿಕ ಡಿ ಇಂಡೋಲಿಮಿಥೆನ್ ಆಂಡ್ರೋಜೆನನ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ. ಡಿ ಇಂಡೋಲಿಥೇನ್ ರಾಸಾಯನಿಕದ ಆಕ್ರಮಣ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ಶೇ. ೭೦ ರಷ್ಟು ಕಡಿಮೆ ಮಾಡುತ್ತದೆ. ಎಂದು ಬಯಾಲಾಜಿಕಲ್‌ಕೆಮಿಸ್ಟ್ರಿ ಪತ್ರಿಕೆಯ ಈಚಿನ ಸಂಚಿಕೆಯೊಂದರಲ್ಲಿ ಪ್ರಕಟವಾಗಿದೆ. ಇಂಡೋಲ್ ರಾಸಾಯನಿಕವು ಹೃದಯಾಘಾತವನ್ನು ತಡೆಗಟ್ಟಲು ನೆರವಾಗುತ್ತದೆ ಎಂದು ಇದೇ ಸಂಶೋಧಕರು ಹೇಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂರ್‍ತಿ
Next post ಗಾಂಧಿ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…