ಇಂದಿನ ವಿವಾಹ ವಿಚ್ಚೇದನ

ಇಂದಿನ ವಿವಾಹ ವಿಚ್ಚೇದನ
ಹೆಣ್ಣು ಗಂಡಿನ ಬರೀ ಸ್ವಾರ್ಥತನ|
ನಾನೇ ಮೇಲೆಂಬ ಹುಚ್ಚುತನ
ಗಂಡು ಹೆಣ್ಣಿನ ಆತುರಾತುರತನ|
ನವಜೀವನದ ಅರ್‍ಥತಿಳಿಯದ
ಹೆಣ್ಣು ಗಂಡಿನ ಜೀವನ ಪಥನ||

ಇನ್ನೂ ಹಸೆಯು ಆರಿರುವುದಿಲ್ಲ
ಇನ್ನೂ ಚಪ್ಪರ ಸಡಿಲಿಸಿರುವುದಿಲ್ಲ|
ಆಗಲೇ ವಿರೋಧ ಭಾವ
ಎಲ್ಲದಕೂ ಸಿಡಿಮಿಡಿ
ಏನನೋ ಕಳಕೊಂಡಂತೆ ಚಡಪಡಿಕೆ|
ನಾನು ಹೇಳಿದಂತೆಯೇ ನಡೆಯಲಿಲ್ಲವಲ್ಲ
ನನಗೇಕೋ ಸರಿಯೆನಿಸುತ್ತಿಲ್ಲ
ನನಗೆ ಈ ಮದುವೆ ಇಷ್ಟವಿಲ್ಲ||

ಯಾವುದಕ್ಕೂ ತಾಳ್ಮೆಯಿಲ್ಲ
ಎಲ್ಲಾ ಮೂಗಿನ ನೇರಕೆ ನಡೆಯಬೇಕು|
ಯಾರ ಮಾತಿಗೂ ಗೌರವವಿಲ್ಲ
ಎಲ್ಲ ಬರೀ ಒಣ ಪ್ರತಿಷ್ಠೆಯ ಜಂಭ|
ಕಠಿಣ ಪರಿಶ್ರಮವಿಲ್ಲದೆ ಬಂದ ಹಣದ ಬಲ
ಪ್ರೀತಿ ಪ್ರೇಮದ ಅನುಭವದ ಕೊರತೆ
ಸಮಯ ಭರಾಟೆಯ ನಡುವೆ
ಜೀವನದ ಮೌಲ್ಯಗಳ ಹರಾಜಕತೆ||

ಹಿಂದೆ ಅದೆಷ್ಟು ಅರ್‍ಥಪೂರ್‍ಣ
ನಮ್ಮ ಶುಭ ವಿವಾಹ ಬಂಧನ|
ಜನ್ಮ ಜನ್ಮಾಂತರದ ಬಂಧ
ಸಂಬಂಧಗಳ ಋಣಾನುಬಂಧ
ಎನ್ನುವ ಭಾವ, ಭಾವೈಕ್ಯತೆ|
ಎಲ್ಲವೂ ದೈವ ಸಂಕಲ್ಪವೆಂಬ
ಅತೀವ ನಂಬಿಕೆ, ಎಲ್ಲವೂ ಸುಖಾಂತ್ಯ|
ಆದರಿಂದು ಬರಿಯ ನಾಟಕೀಯತೆ
ವಿದ್ಯಾವಂತರೆನಿಸಿಕೊಂಡವರ
ಅವಿವೇಕತನದ ಪರಮಾವಧಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಕ್ಕಿನ ಹಾಡು
Next post ಶ್ರೀಕೃಷ್ಣನ ಕೊಳಲಿಗೆ

ಸಣ್ಣ ಕತೆ

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…