ಸ್ವಾತಿಯ ಮಳೆ

ಸ್ವಾತಿಯ ಮಳೆ ಹನಿ
ಹನಿಯಾಗಿ ನಾನು|
ಮುತ್ತಾಗಬಯಸುವೆನು
ನಿನ್ನೆದೆಯ ಪ್ರೀತಿಕಡಲಾಳದಲ್ಲಿ|
ಹ್ಞೂ ಅನ್ನು ಉಹ್ಞೂ ಅನ್ನು
ನಾ ಬಂದಿರುವುದೆ ನಿನಗಾಗಿ
ನಿನ್ನ ಹೃದಯದ ಬಾಗಿಲು
ತೆರೆಯುವುದೆ ನನಗಾಗಿ||

ಅದೆಷ್ಟೋ ದಿನ ಕಾದಿರುವೆ ನಿನಗಾಗಿ
ಈ ಶುಭ ಮಹೂರ್ತಕ್ಕಾಗಿ|
ಬಂದಿದೆ ಶುಭಘಳಿಗೆ
ನಿನ್ನೊಲವಲಿ ಕರಗಿ ನೀರಾಗಿ
ಇಳೆಯಾಗಿ ಇಳಿಯುತಿರುವೆ|
ನೀನಿರುವೆ ನನ್ನೊಳಗೆ
ಬಂದು ಸೇರುವೆನು ನಿನ್ನೊಳಗೆ||

ಚಂದ್ರಮಗೆ ಚಕೋರಿ ಕಾಯುವಂತೆ
ಮುಂಗಾರಿಗೆ ಮಯೂರ ಹಾತೊರೆಯುವಂತೆ|
ಕಾದು ಕಂಪಿಸುತಿರುವೆ ನಾ ನಿನಗೆ
ನಮ್ಮಿಬ್ಬರ ಪ್ರೇಮ ಸಮಾಗಮಕೆ|
ಅದು ಆಗಲಿಂದೇ ಎಂದು ಕೈ ಚಾಚಿ
ಅಭಿಮುಖಳಾಗೆನ್ನ ಅಭಿಸಾರಿಕೆ||

ಉದಯಿಸಲಿ ಪ್ರೇಮ ಯುಗ
ಮೇಳೈಸಲಿ ಹೊಸರಾಗ ಸಂಯೋಗ|
ನಾಂದಿ ಹಾಡಲಿ ನವಯುಗ
ಆತ್ಮ ಸಮ್ಮಿಲನ ಮಾಡೋಣ, ಈ
ಜನ್ಮ ಸದುಪಯೋಗ ಪಡೆಯೋಣ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚರಿತ್ರೆ
Next post ನನ್ನ ಹಾಡು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…