ಸಾಯಿ ರಾಮ್

ಸಾಯಿ ರಾಮ್
ಸಾಯಿ ರಾಮ್||
ಸರ್ವರ ಮಾಲೀಕನೇ
ಸಾಯಿ ರಾಮ್|
ಶ್ರದ್ಧಾ ಭಕ್ತಿಯ
ಭಕ್ತರ ಸಲಹೊ
ಸ್ವಾಮಿಯೇ ಸಾಯಿ ರಾಮ್|
ಸತ್ಯ ಅಹಿಂಸೆಯ
ರಕ್ಷಿಪ ಅವಧೂತನೇ
ಸಾಯಿ ರಾಮ್||

ಶಾಂತಿಯ ದೂತನೆ
ಸಾಯಿ ರಾಮ್
ಸಂಕಲ್ಪ ಸಿದ್ಧಿಪನೆ
ಸಾಯಿ ರಾಮ್|
ಕರುಣಾಮೂರ್ತಿಯೇ
ಸಾಯಿ ರಾಮ್
ಅನಾಥ ಬಂಧುವೇ
ಸಾಯಿ ರಾಮ್||

ಸಜ್ಜನರ ಪೊರೆವನೆ
ಸಾಯಿ ರಾಮ್
ಸರ್ವರ ಸಮಾಧಾನಿಸೊ
ಸಾಯಿ ರಾಮ್|
ಭಕ್ತರ ಮನದಿ
ನೆಮ್ಮದಿ ತುಂಬುವ
ಸಾಯಿ ರಾಮ್|
ಕಷ್ಟದ ಕಣ್ಣೀರ
ಒರೆಸುವ ಗುರು
ಜಂಗಮ ದೇವನೇ
ಸಾಯಿ ರಾಮ್||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವಗಾಳಿ
Next post ನಾಚಿಕೆ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…