ಇದು ಬರಿ ನಾಡಲ್ಲೋ…

ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ
ಇದು ಬರಿ ನಾಡಲ್ಲೋ…||

ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು
ಹಲವು ಪ್ರಥಮಗಳ ವೈಭವದ ನಾಡು
ಕ್ರಾಂತಿಕಾರಕ ರೈತ ಚಳುವಳಿಗಳ ನಾಡು
ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು||

ಕುವೆಂಪು ಹಾಮಾನಾ ಮೂರ್ತಿ ತೇಜಸ್ವಿ ಜಿ‌ಎಸ್ಸೆಸ್‌
ಲಂಕೇಶ್‌ ಸುಬ್ಬಣ್ಣ ಶಾಂತವೇರಿ ಶಾಂತಲೆಯನಿತ್ತ ನಾಡು
ಪರಮದೇವ ದೇವತಾರಾಮಯ್ಯ ಲಿಂಗಣ್ಣ
ಕವಿ ವರೇಣ್ಯರು ಜನಿಸಿದ ನಾಡು ||

ಸ್ನೇಹ ಹಸ್ತವ ಚಾಚಿದ ವೀರಾಗ್ರಣಿ
ಕೆಳದಿ ಚೆನ್ನಮ್ಮನಾಳಿದ ನಾಡು
‘ಸಿಸ್ತು’ ತಂದ ಶಿಸ್ತಿನ ಶಿವಪ್ಪನಾಯಕನಾಳಿದ ನಾಡು
ಕೋಟೆ ಕೊತ್ತಲಗಳ ಶಿಲಾಶಾಸನಗಳ ಬೀಡು ||

ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡು
ಈ ಮಲೆನಾಡ ಚಪ್ಪರದಲಿ ಬಿಟ್ಟ ಕಾಯ್ಗಳನೇಕ
ನಾಲ್ವರು ಮುಖ್ಯಮಂತ್ರಿಗಳನ್ನಿತ್ತ ಹೆಮ್ಮೆಯ ನಾಡು
ಕರುನಾಡಿನಲಿ ಶಿಖರದಂತೆ ಮೆರೆತಿಹುದು ಈ ನಾಡು ||

ತುಂಗ ಭದ್ರೆ ಶರಾವತಿ
ಕುಮದ್ವತಿ ವರದೆ ಹರಿದಿಹ ನಾಡು
ಅಡಿಕೆ ತೆಂಗು ಜಾಗರವಾಡುವ ನಾಡು
ಸಿರಿ ಗಂಧದ ಕಂಪ ಸೂಸುವ ಬೀಡು ||

ರಾಜಾ ರಾಣಿ ರೋರರ್ ರಾಕೆಟ್
ನಾಲ್ಕು ಟಿಸಿಲಿನ ಘರ್ಜನೆಯ ರೋಮಾಂಚನ
ಚಲುವಿನ ಸಿರಿ ಜೋಗದ ಬೀಡು
ಈ ಜಗಕೆ ಬೆಳಕ ನೀಡಿದ ನಾಡು ||

ಸರ್‍ವಧರ್‍ಮಗಳ ಸಮನ್ವಯದ ಪ್ರತೀಕ ಈ ನಾಡು
ಕೈಗಾರಿಕೋದ್ಯಮ ಕಲರವದ ಬೀಡು
ಶಿಕ್ಷಣ ತಂತ್ರಜ್ಞಾನದಿ ನಲಿದಿಹ ನಾಡು
ಸಾಹಿತ್ಯ ಕಲೆ ಸಂಸ್ಕೃತಿ ಶಿಲ್ಪಕಲೆಗಳ ತವರೂರು ||

ಸಹ್ಯಾದ್ರಿ ಕೊಡಚಾದ್ರಿಯ ಸೆರಗಿನಲಿ
ಸಸ್ಯಶ್ಯಾಮಲೆಯಲ್ಲರಳಿದ ಈ ನಾಡು
ಪಕ್ಷಿ ಸಂಕುಲ ಸಿಂಹದಾಮ ಗುಡ್ಡಬೆಟ್ಟಗಳ ಸಾಲೇ ಸಾಲು
ಎತ್ತರೆತ್ತರ ಮರಗಿಡ ಬಳ್ಳಿ ಕೈಬೀಸಿ ಕರೆತಿಹವು ||
*****
೮-೧-೨೦೧೦ರಲ್ಲಿ ಶಿವಮೊಗ್ಗಾದ ಕ್ರಾಂತಿದೀಪ ಪತ್ರಿಕೆಯಲ್ಲಿ ಪ್ರಕಟ.
೯-೧-೨೦೧೦ರ ಸೃಷ್ಠಿರಾಜ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಲೆ
Next post ಗದ್ದೆ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…