ಅಂಗಳಕ್ಕೆ ಹಾಕಿದ ಬೇಲಿ ಹತ್ತಿರ ನಿಂತಿದ್ದೆ. ಇದ್ದಕ್ಕಿದ್ದಂತೆ ಆಕ್ರಂದನ ಕೇಳಿಸಿತು. ಬೇಲಿಮುರಿದು ಒಳನುಗ್ಗಿದೆ. ಮನೆಯ ಕತ್ತೆಲೆಯ ಮೂಲೆಯಲ್ಲಿ ಎರಡು ಹೋಳಪಿನ ಮಿಣ ಮಿಣ ಕಣ್ಣುಗಳು ಕಾಣಿಸಿದವು. ಮಲಗಿದ್ದ ಮಗು ಎದ್ದು ಕಿಟಾರನೆ ಕಿರಚಿತು. ತಂದೆಯಾದಾವನು ಬಂದು ಬೆಕ್ಕನ್ನು ಎತ್ತಿ ಕೊಂಡು ಮುದ್ದಿಸಿದ, ತಾಯಿ ಧಾವಿಸಿ ಓಡಿಬಂದು ಕಂದಮ್ಮನನ್ನು ಎದೆ ಗವಿಚಿಕೊಂಡು ಮುದ್ದಿಸಿದಳು. ಅಲ್ಲಿಗೆ ಬಂದ ಹಾವೊಂದು ಸುಮ್ಮನೇ ಹರಿದು ಹೋಯಿತು.
*****