ತೇಲು

ನಿನ್ನ ತೆರೆದ ಆಕಾಶದ ಮನೆಯಲ್ಲಿ
ಎದೆ ತೆರೆದು ಯಾವ ಅರಿಕೆಯಿಲ್ಲದೇ
ನಾನು ಹಾಡುತ್ತಿದ್ದೇನೆ ಮತ್ತೆ ಎಲ್ಲ
ರೂಹುಗಳ ಕಳಚಿಕೊಂಡ ರೆಕ್ಕೆಗಳು ಈಗ
ವಿಶಿಷ್ಠವಾಗಿದೆ.

ಓಣಿಯ ಕೆಸರು ದಾಟಿದ ಹೆಜ್ಜೆಗಳು
ಬಯಲ ಸಂಭ್ರಮದಲ್ಲಿ ಬದುಕ ಅರಳಿಸಿ
ಖಾಯಂ ಆಗಿ ಖುಷಿಯಿಂದ ಹಾರುತ್ತಿದ್ದಾರೆ
ಹಗುರವಾಗಿ ಅವರ ಕಾಲುಗಳು ಓಲಾಡುತ್ತಿವೆ.

ತೆರೆದ ಆಕಾಶದಲಿ ಎಲ್ಲ ಮೋಡಗಳ
ಘರ್ಜನೆಯಲಿ ಮಿಂಚು ಫಳಫಳಿಸಿ
ಹಕ್ಕಿಯಾಗಿ ಹಾರಾಡಿದ ಅವನ ಒಲವು
ಮೇಘ ಮಲ್ಹಾರದ ರಾಗಗಳು ಭೂಮಿಯ
ಸಂತೈಸಿವೆ.

ಬದುಕಿನಾಚೆಯ ಸಾವಿನಾಚೆಯ ಬೆಳಕು
ಕವಿತೆಗಳು ನದಿಯಾಗಿ ಹರಿದು ಹಸಿರು
ಹಬ್ಬಿದ ಜನದ ಸಂಭ್ರಮಕೆ ದೀಪಗಳು
ಉರಿದಿವೆ ನಿನ್ನ ವಿಶಾಲ ದೇವರ ಮನೆಯು
ಅಲಂಕರಿಸಿಕೊಂಡಿದೆ.

ಅಲ್ಲಿಯದೋ ಇಲ್ಲಿಯದೋ ಮನಸ್ಸು
ಮುದಗೊಂಡ ಆಲಾಪಗಳು, ಹಸಿರು ಬಯಲು
ಬಿಳಿ ಮೋಡಗಳು, ನೀಲಿ ಆಕಾಶದಲಿ ನಕ್ಷತ್ರಗಳು
ಸಿರಿ ಸಗ್ಗ ಹೂಗಳರಳಿ ನೆಟ್ಟ ಸಸಿ ಫಲ ಶಾಂತಿ
ವಶವರ್ತಿಗೊಂಡಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋಗದ ಜೋಗಿ ನೀನು
Next post ಮೂಲವರಿಯದೆ ಪಥ್ಯವಿಲ್ಲದೆ ಚಿಕಿತ್ಸೆ ಫಲಿಸೀತೇ?

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…