ಗುಬ್ಬೀಯ ನಿದ್ಯಾಗ ಸುಬ್ಬಿ

ಗುಬ್ಬೀಯ ನಿದ್ಯಾಗ ಸುಬ್ಬಿ ನೀ ಸೆಡುವೇನ
ಗುಂಯ್‌ಗಡಕ ಗಿಣಿಹೆಣ್ಣ ಹೊರಹೋಗ ||ಪಲ್ಲ||

ಗುಲಗಂಜಿ ಗುಳಕವ್ವ ಗಿಲಗಂಜಿ ಉಳುಕವ್ವ
ಎದಿಯಾಗ ಸೋಬಾನ ಹಾಡ್ಬೇಡಾ
ಶಿರಬಾಗಿ ಕೈಮುಗಿವೆ ಕುಣಕೊಂತ ಹೋಗವ್ವ
ಉದ್ದುದ್ದ ಕೋಲಾಟ ಆಡ್ಬೇಡಾ ||೧||

ಕಲಸಕ್ರಿ ಗುಡದಾಗ ಜೇಂತುಪ್ಪ ಕಟ್ಯಾಗ
ವಟವಟ ಕಪ್ಯಾಗಿ ವಟಿಬೇಡಾ
ನೆಲ್ಲೀಯ ಮರದಾಗ ಬಚಬಾಯಿ ಹಲ್ಲ್ಯಾಗಿ
ಬೋರಂಗಿ ಕಚಕಚ ತಿನಬೇಡಾ ||೨||

ಯಾಲಕ್ಕಿ ವನದಾಗ ಹಾಲಕ್ಕಿ ನನಮಕ್ಳು
ಕಟ್ಟಿರಿವಿ ನೀನಾಗಿ ಕಡಿಬೇಡಾ
ಹಸಗೊಂಡು ಮಲಗ್ಯಾವು ಅತ್ತತ್ತು ಸೋತಾವು
ಕನಸೀನ ತೊನಿಸ್ಯಾಗಿ ಕಾಡ್ಬೇಡಾ ||೩||

ಸವದತ್ತಿ ಈರಣ್ಣ ಹಾರ್‍ಯಾರಿ ಬರತಾನ
ನಿನತುರುಬ ಬೇ ಹುಡಿಗಿ ಬಡಿತಾನ
ಕುರವತ್ತಿ ಬಸವಣ್ಣ ಸರವತ್ತು ಬರತಾನ
ಚಂಡೀಗೆ ಲೇ ಹುಡುಗಿ ಜಡಿತಾನ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೇಮ್ಸ್
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೨

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…