ಕೆಳಗೆ ಬಿದ್ದೆಯಾ ಮಗನೆ

ಕೆಳಗೆ ಬಿದ್ದೆಯಾ ಮಗನೆ ಕೆಳಗೆ ಬಿದ್ದೆಯಾ
ಮೇಲೆ ಏಳು ನೀ ತಕ್ಷಣ – ಇಲ್ಲವೆ ನೀನು ಎಲ್ಲರ
ಪಾದ ಧೂಳಿಯೇ ಮರುಕ್ಷಣ //ಪ//

ಮೇಲೆತ್ತುವವರಾರೂ ಇಲ್ಲ
ಬಿದ್ದರೆ ನೀ ಎಲ್ಲರ ತಾಂಬೂಲ
ಬಿದ್ದವ ನೀನೆ ಏಳಲು ಬೇಕು
ಎದ್ದವ ನೀನು ಬಾಳಲು ಬೇಕು

ತಪ್ಪುಗಳು ನಿನ್ನಿಂದಲೆ ಆಗದು
ಇನ್ನೊಬ್ಬರು ಸಹ ಕಾರಣವಹುದು
ಎಲ್ಲರ ನಡುವೆಯೆ ಬದುಕಬೇಕು
ಬದುಕಿಯೆ ಅಲ್ಲವೆ ಜೈಸಬೇಕು

ಬದುಕೆಂದರೆ ಇಲ್ಲಿ ಎಲ್ಲ ಋತುಗಳು
ಎಲ್ಲ ಋತುವಲೂ ಎಲ್ಲ ಲಗ್ನಗಳು
ಲಗ್ನವೆಂದರೆ ಬೇಡವೆ ವಿಘ್ನ
ಮಾವು ಬೇವು ನಮಗಲ್ಲವೆ ಅನ್ನ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಳ್ಳು ಸ್ವಪ್ನ
Next post ಸಂಕಟ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…