ರೆಡಿ ರೆಡಿ ರೆಡಿ ರೆಡಿ ಎವರೆಡಿಯೊ
ತಡಿ ತಡಿ ತಡಿಯಂದ್ರ ನೀ ಕಡಿಯೊ ||ಪಲ್ಲ||

ಯಾಮಿನಿಟು ಸರಸಗಟು ಗಂಟುಮೂಟೆಯ ಕಟ್ಟು
ಹೊಂಡಂದ ಗಳಿಗ್ಯಾಗ ನಾರಡಿಯೊ
ಯಸ್ಸಂದ್ರ ಇಲ್ಲಂಬೊ ಉಸ್ಸಂದ್ರ ನೋವಂಬೊ
ಯಸ್ಸೀನ ಕಿಸ್ಸೀಗಿ ನಾ ಕಡಿಯೊ ||೧||

ಟಿಂಟಾಂಗು ಡಿಂಡಾಂಗು ಡೋಲಾಗು ಡೈಲಾಗು
ಡಾರ್‍ಲಿಂಗು ಬಾರ್‍ಲಿಂಗು ಡುಂಡುಶ್ಶೋ
ಸಿಂಗ್ ಸಾಂಗು ಪಿಂಗ್ ಪಾಂಗು ಸುಂಸೋಂಗು ಹಚಮಂಗು
ಹುಡಗೀಯ ರೇಸಿಂಗು ಠುಂಠುಶ್ಶೋ ||೨||

ಕಿಂಗೀನ ಕಾಮಿನಿ ಯಂಗೀನ ಭಾಮಿನಿ
ಯಾಮೀನಿ ಟಾಮಿನಿ ಟಿಂಟಿಂಟೋ
ಕರ್ಲಂಬೊ ಗರ್‍ಲ್ಯಾಕೊ ಉರ್‍ಲಂಬೊ ವರ್ಲ್ಡಯಾಕೊ
ಪರ್ಲಂಬೊ ಪ್ರೇಮ್ಯಾಕೊ ಪಂಪಂಪೋ ||೩||

ಡ್ರಿಂಕಿಂಗು ಡ್ರ್‍ಈಮಿಂಗು ಫಿಲ್ಮಿಂಗು ರೋಮಿಂಗು
ರ್‍ಯಾಗಿಂಗು ರಂಗವ್ವ ರಂರಾಡ್ಯೋ
ರೂಮಿಗಿ ನಾನಂಟು ಬುಕ್ಕೀಗಿ ನಾಗಂಟು
ಎಗ್ಝಾಮು ಎಲ್ಲವ್ವ ನಂಟಂಟೋ ||೪||

ಥಂಡರು ತಡಿತಡಿ ವಂಡರು ವಡಿವಡಿ
ಪುಂಡರು ಪೌಡರು ಬೇಡವ್ವೋ
ರಂಗಣ್ಣ ಬಾರಣ್ಣ ಮಂಗಣ್ಣ ಹೋಗಣ್ಣ
ಸಿಂಬಳ ಗುಂಬಳ ಯಾಕವ್ವೋ ||೫||
*****