ಕಳಕಳಿ

ಕೆಲ ಗಂಡಸರೇ, ನೀವುಗಳೆಲ್ಲ
ಗಂಭೀರವಾಗಿ ಯೋಚಿಸಿ
ಉಂಡಾಡಿ ಗುಂಡರಂತಾಗದೆ
ಗಾಂಭೀರ್ಯತೆ ಉಳಿಸಿಕೊಳ್ಳಿ

ಎಲ್ಲೆಂದರಲ್ಲಿ ಗಲ್ಲಿ ಗಲ್ಲಿಗಳಲ್ಲಿ
ಸಿಕ್ಕ ಸಿಕ್ಕ ಹೆಂಗಸರ ಮುತ್ತಿಕ್ಕಿ
ಮೆಟ್ಟಿನೇಟಿಗೆ ಗುರಿಯಾಗದಿರಿ
ಮಚ್ಚಿನೇಟಿಗೆ ಬಲಿಯಾಗದಿರಿ

ಅತ್ಯಾಚಾರ ಮಾಡಿ ನೀವು
ನೇಣು ಪಾಲಾಗದಿರಿ
ತಂದೆ ತಾಯಿ ಮನೆಯವರ ಮಾನ
ಬೀದಿಯಲಿ ಮಾರದಿರಿ

ಕರುಣೆಯ ತೋರುವವರಾರಿಲ್ಲ
ನಿನ್ನ ಹೇಯ ಕೃತ್ಯವ ಕಂಡು
ಅಬಲೆಯಾದರೂ ಅವಳು ಆ ಕ್ಷಣಕೆ
ಸಬಲತೆಯ ಪಡೆಯುವುದು ನಂತರ ಪ್ರಕರಣ

ಕ್ಷಣಿಕ ಸುಖದ ಅಮಲು
ಕ್ಷೀಣಿಸುವುದು ನಿಮ್ಮಯ ಬದುಕು
ಒಪ್ಪಿ ಜೊತೆಗೆ ಬಂದರೂ ಹೆಣ್ಣು
ಎಚ್ಚೆತ್ತುಕೊಂಡು ಮುನ್ನಡೆಯಬೇಕಿನ್ನು

ಸುಖಮಯ ಜೀವನ ನಿನ್ನದಾಗಲು
ಅನ್ಯ ಹೆಣ್ಣುಗಳಿಗೆ ಕಣ್ಣು ಹಾಕದಿರು
ಮಡದಿಯ ಜೊತೆಗೆ ಮಮತೆಯಿಂದಿರು
ಸುಖದ ಸಂಸಾರದ ದೀಪ ನೀನಾಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂಗಿ
Next post ರಾಜಕೀಯ ಪ್ರೀತಿ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…