ಪ್ರೇಮ ಎಷ್ಟೊಂದು ಅನೈತಿಕ

 

ಇದು ಶುದ್ಧ ಸುಳ್ಳು; ಚಾರಿತ್ರಿಕ ಸತ್ಯ.

ಸಿಡಿಲಿನ ಹೊಡೆತದಂತೆ ಸೂಳೆಯರ ಕೇವಲ ಒಂದು ನೋಟ
ಮತ್ತು ಸ್ಪರ್ಶದಿಂದ ದಿಕ್ಕೆಟ್ಟ ಭೂಮಿ, ಗಾಳಿ, ನೀರು ಮತ್ತು
ಸೂರ್ಯಚಂದ್ರರೂ ತಲೆ ತಿರುಕರಂತಾಗಿದ್ದಾರೆ.

ಏಕೆಂದರೆ, ಇದು ಕೇವಲ ಅವೆಲ್ಲವುಗಳಿಂದ ಮುನ್ನಡೆದ ಕ್ರಿಯೆ.
ನಡತೆಗೆಟ್ಟ ಕೆಲವರು ದೂರವಾದ? ಅವೆಲ್ಲವೂ ಕ್ಷಣಕ್ಷಣಕ್ಕೂ
ಬದಲಾಗುವಷ್ಟರಮಟ್ಟಿಗೆ ಕ್ರಿಯಾಶೀಲತೆಯನ್ನು ಸಾಧಿಸಿಕೊಂಡಿವೆ.

ಯಾರೋ ನಗುವುದು, ಮುಗುಳ್ನಗುವುದು-
ಹೃದಯಭಾಗಕ್ಕೆ ತಟ್ಟುತ್ತಲೇ ಪ್ರೇಮ ಹುರುಳಿಲ್ಲದ ವಾದದಂತೆ
ದೌಡಾಯಿಸತೊಡಗುವುದು.

ಜಗತ್ತು ಸೃಷ್ಟಿಯಾದಾಗ ಹೂಗೊನೆಗಳಂತೆ ತೇಲಿಬಂದ
ಬೆಟ್ಟಗುಡ್ಡಗಳು, ಕಪ್ಪುಕಡಲು, ಮರಗಿಡಗಳು, ಪ್ರಾಣಿಸಂಕುಲ,
ಇಡೀ ಮಾನವಕುಲವನ್ನೇ ಸುಟ್ಟು ಕರಕಲಾಗಿಸಿಬಿಡುವ ಜ್ವಾಲಾಮುಖಿ;

ಗುರುತೇ ಇಲ್ಲದಂತೆ ನಶಿಸಿಹೋದರೂ
ಪ್ರೇಮ ಮತ್ತೊಮ್ಮೆ ಸಂಸ್ಕರಣೆಗೊಂಡು ಹೃದಯಭಾಗದಲ್ಲಿ
ಶೇಖರಣೆಯಾಗುವುದು.

ಜಡ ಆತ್ಮಗಳು ಮತ್ತೊಮ್ಮೆ ಹಿರಿಯ ಚೇತನಗಳಂತೆ
ಬಿರಿಯತೊಡಗುತ್ತವೆ.

ಪ್ರೇಮದ ಮಾತನಾಡುವ ಎಷ್ಟೋ ಜನರು
ಬೆಚ್ಚನೆಯ ಮನೆಯಲ್ಲೇ ವಾಸಿಸತೊಡಗುತ್ತಾರೆ,
ತಂಗಲು ಬರುವ ದೂರದೂರಿನ ಪ್ರಯಾಣಿಕರು
ತಮ್ಮ ಅನಾನುಕೂಲತೆಗಳ ಬಗ್ಗೆ ಚಿಂತಿಸತೊಡಗುತ್ತಾರೆ;
ಗೊಣಗಾಡಿಕೊಂಡು ನಿದ್ರೆಗಿಳಿಯುತ್ತಾರೆ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧೀನ ಧೀನ ಖೇಲ ಚಲೋ ಅಲಾವಾ
Next post ಕೊರವಂಜಿಯ ಕಲೆ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…