Home / ಲೇಖನ / ವಿಜ್ಞಾನ / ಒಂಟಿ ಮಹಿಳೆಯರ ಭಯ ನಿವಾರಕ ಅಸ್ತ್ರ

ಒಂಟಿ ಮಹಿಳೆಯರ ಭಯ ನಿವಾರಕ ಅಸ್ತ್ರ

ಸಾಮಾನ್ಯವಾಗಿ ಹೊರಗಡೆ ಹೆಣ್ಣುಮಕ್ಕಳು ಸ್ವತಂತ್ರವಾಗಿ ತಿರುಗಾಡುವಾಗ ಪುಂಡಪೋಕರಿಗಳ ಭಯ, ಕಳ್ಳಕಾಕರಭಯ ಇದ್ದೇ ಇರುತ್ತದೆ. ಸ್ವತಂತ್ರ ದೇಶದಲ್ಲಿ ಅತಂತ್ರವಾದ ಈ ಅಬಲೆಯರ ಸ್ಥಿತಿಯನ್ನು ಕಂಡೇ ಅನೇಕ ಕಡೆ ಕರಾಟೆ, ಕುಂಗಫೂಗಳನ್ನು ಕಲಿಸಿ ಇವರಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು ಕಂಡುಕೊಳ್ಳಲಾಯಿತು. ಒಂದಕ್ಕಿಂತಲೂ ಹೆಚ್ಚು ಅಪಾಯಕಾರಿ ಜನ ಒಂಟಿ ಮಹಿಳೆಯ ಮೇಲೆ ಆಕ್ರಮಣ ಮಾಡಿದಾಗ ತನ್ನನ್ನು ರಕ್ಷಿಸಿಕೊಳ್ಳಲು ಒಂದು ಹೊಸ ಅಸ್ತ್ರವನ್ನು ನಮ್ಮ ಬೆಂಗಳೂರಿನವರೇ ಆದ ರಾಣಾಸಿಂಗ್ ಎಂಬುವವರು ಕಂಡು ಹಿಡಿದರು. ತಮ್ಮ ‘ಆಕ್ಸ್‌ಗ್ಲೋಮ್ ’, ಸಂಸ್ಥೆಯಿಂದ ಇಂಥಹ ಅಸ್ತ್ರಗಳು ಈಗಾಗಲೇ ಅಸಂಖ್ಯವಾಗಿ ಸೃಷ್ಟಿಯಾಗುತ್ತವೆ. ಈಗಾಗಲೇ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಪ್ರತಿ ಪೋಲಿಸರ ಕೈಯಲ್ಲಿ ಕಳ್ಳರನ್ನು, ವಂಚಕರನ್ನು ಏಕಾಂಗಿಯಾಗಿ ಸದೆಬಡಿಯಲು ಇಂಥಹ ಅಸ್ತ್ರಗಳಿರುತ್ತವೆ. ಇದು ಸೊಂಟಕ್ಕೆ ಸಿಕ್ಕಿಸಿಕೊಳ್ಳಬಹುದಾದಷ್ಟು ಸಣ್ಣದಾದ ಡಬ್ಬಿ, ಕೈಯಲ್ಲಿ ಸುಲಭವಾಗಿ ಹಿಡಿದುಕೊಳ್ಳಬಹುದಾದ ಅಸ್ತ್ರ ಇದಾಗಿದೆ. ಇದನ್ನು ಬಳೆಸಲು ಕಾನೂನು ಸಮ್ಮತಿಯನ್ನು ಕೂಡ ಪಡೆಯಲಾಗಿದೆ. ಹೆಚ್ಚಾಗಿ ಒಂಟಿ ಮಹಿಳೆಯರು, ಕಾಲೇಜು ಹುಡುಗಿಯರಿಗಾಗಿ ಇದನ್ನು ರೂಪಿಸಲಾಗಿದೆ. ಇಂಥಹ ವೈಶಿಷ್ಟ್ಯ ಪೂರ್ಣವಾದ ಅಸ್ತ್ರದ ಹೆಸರು ‘ಕೊಬ್ರಾ’ ಹಾಗಾದರೆ ಈ ಕೊಬ್ರಾದಲ್ಲಿ ಏನಿದೆ? ಇದೊಂದು ಸಣ್ಣಡಬ್ಬಿಯಾಗಿದ್ದು ಖಾರದಪುಡಿಯನ್ನು ಎರಚುವ (ಸ್ಪ್ರೇ ಮಾಡುವ) ಅಸ್ತ್ರ.

ಖಾರದ ಮೆಣಸಿನ ಕಾಯಿಗಾಗಿ ಪ್ರಸಿದ್ಧಿಯಾದ ಆಂಧ್ರಪ್ರದೇಶದಿಂದ ತರಿಸಿದ ಖಾರದಪುಡಿಯನ್ನು ಈ ಉಪಕರಣದಲ್ಲಿ ತುಂಬಲಾಗುತ್ತದೆ. ಅತಿ ಖಾರಕ್ಕೆ ಕಾರಣವಾಗಿರುವ ‘ಓಲಿಯಾರೆಸಿನ್ ಕ್ಯಾಪ್ಲಿಯನಿನ್’, ಎಂಬ ಸಾರವನ್ನು ಇದರಲ್ಲಿ ಸೇರಿಸಲಾಗಿದೆ. ಇಂಥಹ ಸಣ್ಣ ಹಿಡಿದುಕೊಳ್ಳಲು ಅನುವು ಇರುವ ಈ ಸಣ್ಣ ಡಬ್ಬಿಯನ್ನು ಸೊಂಟಕ್ಕೆ ಕಾಣದಂತೆ ಕಟ್ಟಿಕೊಳ್ಳಬಹುದು. ದುಷ್ಟರು ದಾಳಿ ನಡೆಸಿದಾಗ ಅವರ ಮೇಲೆ ಒಂದೇ ಒಂದು ಸಲ ಸ್ಪ್ರೇ ಮಾಡಿದರೆ ಸಾಕು ಆ ದುಷ್ಟರ ಕಣ್ಣುಗಳಲ್ಲಿ ವಿಪರೀತ ಉರಿವುಂಟಾಗುತ್ತದೆ. ಮೂಗು ಮುಖ ಕೂಡ ನೋವಿಗೊಳಗಾಗುತ್ತದೆ. ಆತ ತಕ್ಷಣ ಕುರುಡನಾಗುತ್ತಾನೆ. (ತಾತ್ಕಾಲಿಕವಾಗಿ) ಈ ಉರಿತ ಕನಿಷ್ಟ ಎರಡು ಗಂಟೆಗಳ ಕಾಲ ಈ ಪರಿಣಾಮ ಇರುತ್ತದೆ. ಆಗ ಆ ವ್ಯಕ್ತಿ ನಿಂತನೆಲದಲ್ಲಿಯೆ ಕುಸಿದು ಬೀಳುತ್ತಾನೆ. ಹೇಗಿದೆ ನೋಡಿದಿರಾ ಒಂಟಿ ಮಹಿಳೆಯರ ರಕ್ಷಣೆಯ ಅಸ್ತ್ರ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...