ಅದು ನೋಡು ಅದು ನೋಡು
ಬ್ರಹ್ಮಾನಂದದಿ ಮುಣಗ್ಯಾಡ್ವುದು ನೋಡು ||ಪ||

ಸುತ್ತಲೆ ವ್ಯಾಪಿಸಿಕೊಂಡುದ ನೋಡು
ಅತ್ತಲೆಷ್ಟು ದಶಕಾಂಗುಲಿ ನೋಡು ||೧||

ಅರವಿನ ಜಾಲದಿ ತೊಡಕೆದ ನೋಡು
ಗುರುವಿನ ಕೀಲ ಹಾಕೆದ ನೋಡು ||೨||

ನೋಡೆನೆಂದರೆ ಕಾಣಿಸುವುದಿಲ್ಲಾ
ನೋಡಿದರಾಕ್ಷಣ ಬಿಡುವುದಿಲ್ಲಾ ||೩||

ಹರಿಯೂ ಅಲ್ಲಾ ಹರನು ತಾನಲ್ಲಾ
ಧರಿಯೊಳು ಶಿಶುನಾಳಧೀಶನೆ ಬಲ್ಲಾ ||೪||

****