ಹೇಳೂನು ಬಾರೋ ಸವಾಲಿನ ಆಕ್ಷರಾ           ||ಪ||
ಕಾಳ ಕರ್ಬಲದೊಳು ಖೇಲ ಖೇಲ ಖೇಲ

ನಾಳೆ ಶಹಾದತ್ತ ಪಂಜ ತಾಬೂತ
ಮ್ಯಾಳ ಹಿಡಿದು ಬಳ್ಳಿ ಖೇಲ ಖೇಲ ಖೇಲ         ||೧||

ಲಾಡಿ ತಗದು ಚಲ್ಲಿ
ಬೇಡಿಕೊಂಡಾಡೊ ಮವಲ್ಲಿ                      ||೨||

ನೋಡಿಕೊ ಶಹದತ್ತ ಕಿತಾಬಿನ ದಾಖಲೆ
ನೋಡಿ ಜಗತ್ಪತಿ ಖೇಲ ಖೇಲ ಖೇಲ             ||೩||

ಶಿಶುನಾಳಧೀಶನ ಹೊಸ ರಿವಾಯತ ಸುಳ್ಳು
ಐಸುರದೊಳು ಖೇಲ ಖೇಲ ಖೇಲ                 ||೪||

*****