ಸಣ್ಣಬಾಲಕನಿವನೋ ಕಾಸೀಮನೋ
ಸಣ್ಣಬಾಲಕನಿವನೋ || ಪ ||
ಮೌನದಲಿ ಮಹಾಮಂತ್ರ ಜಪಿಸಿ
ಜ್ಞಾನ ಪೈಗಂಬರರು ಇವರು
ತಾನೇ ಆರುದಿನ ಶಾರದಿ
ಧೀನ ಧೀನೆಂದೆನುತ ಕುಣಿಯುವ || ೦ ||
ಧಾಮಶಪುರದ ಕ್ವಾಟಿ ಬಾಗಿಲು ಮುರಿದು
ಪ್ಯಾಟಿ ಲೂಟಿಮಾಡಿ ಈ ಕ್ಷಣ
ದಾಟಿ ಬರುವ ಸಮಯದೊಳು
ದಿಟ್ಟ ಯಜೀದ ಸಿಟ್ಟಿನಿಂದಲಿ
ಮುಟ್ಟ ಬಾಣವ ಬೀರಿದಾ || ೨ ||
ಆರಣ್ಯದಲಿ ಬೀಬಿಘಾತೀಮ ಹುಡುಕುತಲಿ
ಸ್ವರಗಿದೀಪರಿ ಮರಗಿ ಆಲ್ವರಿ
ಕೊರಗಿ ಕಣ್ಣೀರ ಸುರಿಸುತಲಿ
ಎಂಥಾ ವ್ಯಾಳ್ಯವ ತಂದ್ಯೋ ಶಿವನೇ ನಾ
ಎಲ್ಲಿ ಹುಡುಕುತ ಹೋಗಲಿ || ೩ ||
ಮುತ್ತಿನ್ಹಾರವು ಯಾತಕ್ಕೆ ಯಾರಿಗೆ ಬೇಕೋ
ಮುತ್ತಿನ್ಹಾರವು ಯಾತಕ್ಕೆ
ಆತುರದಿ ಕರಿಮಣಿ ಹರಿದು
ಜಾತುರದಿ ಚಲ್ವರಿದು ಚಲ್ಲಿ
ಧಾತ ಶಿಶುನಾಳಧೀಶನಲ್ಲಿ
ಪ್ರೀತಿ ಇಟ್ಟುಕೊಂಡು ನೀ ಬಾ || ೪ ||
*****