ಹಗಲ ಕಣ್ಣನು ಮಂಕು ಕವಿಯಿತು, ಮುಗಿಲ ಬಾಣದ ಬಿರುಸು ಹೆಚ್ಚಿತು, ನೆಗೆದು ನೊರೆಯನು ಕೀಳುತೋಡಿತು ಮಲೆಯನಾಡಿನ ಹೇಮೆಯು. ಕರೆಯ ಮಂಟಪದೊಳಗೆ ಕುಳಿತು, ಬೆರಗುಮಾಡುವ ಪ್ರಕೃತಿಯಂದಿನ ಇರವ ನೋಡುತ ಮೂಕರಾದೆವು ನಾನು ರಾಮ ಇಬ್ಬರೂ. ಮುಗಿಲಿನಾರ್‍ಭಟ, ಗಾಳಿ...

ರನ್ನ ದುಡುಗುಣಿ ಚಿನ್ನದ ಕೊಂಡಿ ಹೊನ್ನಿನಾ ಡಾಬಾ ಇಟ್ಟಿದಳಽ| ಎಣಕೆನಿಲ್ಲದೆ ಮಾಣಿಕಸಽರ ಎದಿಬದಿ ತಾನು ಹಾಕುವಳಽ| ಕಡಿಯ ಕಂಕಣ ಕಮಳದ ಮುಖಿಯ ಹೊಳಿವ ಮುತ್ತಿನ ವಾಲಿಗಳಽ| ಜಯ ಜಯ ಮಂಗಳಽ| ಜಯ ಜಯ ಮಂಗಳಽ| ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೧|| ಕಸ...

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಆದ್ದರಿಂದ ಇಂದಿನ ಮಕ್ಕಳೆಲ್ಲ ವಿಜ್ಞಾನದತ್ತ ಒಲವು ತೋರಿಸಬೇಕು. ಅದರಲ್ಲೂ ಭೌತವಿಜ್ಞಾನವನ್ನು ಅಭ್ಯಸಿಸಬೇಕು. ಜ್ಞಾನ ವಿಜ್ಞಾನದ ಮುನ್ನಡೆ ದೇಶದ ಮುನ್ನೆಡೆಯಾಗಿದೆ. ಪ್ರತಿವರ್‍ಷ ಲಂಡನ್‌ನ ರಾಯಲ್ ಸೊಸೈಟಿ ನೀಡು...

(ಹಾಡು) ಗಿಳಿಬಾಗಿಲ ತೆರೆಯೆಯಾ? ಹೂ ದನಿಯಿನೆನ್ನ ಕರೆಯೆಯಾ? ಬದಲು ಬಿದುವ ತೋರೆಯಾ? ತಾ ರಾಕಟಾಕ್ಷ ಬೀರೆಯಾ? ೪ ಹಣತೆಹುಳವ ನಂದಿಸಿ, ಬಾ ವಲಿಯ ತಕ್ಕಡಿಯೊಂದಿಸಿ, ಇರುಳ ಮಳಿಗೆ ಮುಗಿಯಿತು, ನೈ ದಿಲೆಯ ಬೀಗ ಬಿಗಿಯಿತು. ೮ ಪಡುಹಾಸಂಗಿಯೆಡೆಯಲಂ ಗಾತ ಬಿ...

ಕಣ್ಣೋಟವೋ . . . ಚೆಲ್ಲಾಟವೋ . . . ನೀನು ಕಣ್ಣಲ್ಲೆ ನುಡಿದ ಮಾತು ಕವಿತೆಯಾಗಿದೆ; ನನ್ನ ಕವಿಯ ಮಾಡಿದೆ – ನಿನ್ನ ಹೆಜ್ಜೆಯಲ್ಲಿ ಕಂಡ ನಡಿಗೆ ನವಿಲು ಆಗಿದೆ; ಪ್ರೀತಿ ಸೋನೆ ಸುರಿಸಿದೆ// ಕೆಂಪಾಗಿದೆ . . . ರಂಗೇರಿದೆ . . . ನಿನ್ನ ಕೆಂಪಾ...

ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ ತೆಗೆದುಕೊಂಡಿದ್ದರಿಂದ ನಮ್ಮಲ್ಲಿ ...

ಮಳೆಗೆ ಸಿಗದಂತೆ ನಿಂತಿದ್ದರೂ ಈಗ ಮುರಿದೊಂದು ಮರದ ಕೆಳಗೆ, ಎಲ್ಲ ಕುರ್‍ಚಿಗೂ ಮೊದಲು ಬೆಚ್ಚನೆಯ ಜಾಗದಲಿ ಕಾದಿರುತ್ತಿತ್ತೊಂದು ಕುರ್‍ಚಿ ನನಗೆ ರಾಜಕಾರಣ, ಪ್ರೇಮ ಇತ್ಯಾದಿ ಚರ್‍ಚಿಸುವ ಗೋಷ್ಠಿಯೊಳಗೆ, ಕಾಲ ಏಕಾ‌ಏಕಿ ನನ್ನ ಪರಿವರ್‍ತಿಸುವ ಮುಂಚೆ ಹ...

ರಾಮೂ ಶ್ಯಾಮೂ ಇಬ್ಬರೂ ಒಳ್ಳೆಯ ಸಂಗಾತಿಗಳು. ಯಾವಾಗಲು ಅವರು ಜತೆಯಲ್ಲೇ ಇರುವರು. ಅಡುವಾಗ ಇಬ್ಬರೂ ಒಟ್ಟಿಗೆ ಆಡುವರು. ಓದುವಾಗ ಇಬ್ಬರೂ ಓದುವರು ಆದರೂ ಇವರಿಬ್ಬರಿಗೂ ಒಂದು ಭೇದವಿತ್ತು. ರಾಮು ಹೊತ್ತಿಗೆ ಸರಿಯಾಗಿ ಶಾಲೆಗೆ ಬರುವನು. ಶ್ಯಾಮು ಹೊತ್ತ...

ಮೇಳ ಒಂದು ಗ್ರಹಕೆ ಬಂತು ಗ್ರಹಣ, ಇಂದೆ ಚಂದ್ರಗ್ರಹಣ ಇಂದೆ ಚಂದ್ರಗ್ರಹಣೋ ! ಇಂದೆ ಚಂದ್ರಗ್ರಹಣ. ಮೇಳದ ಹಿರಿಯ ಕೆನೆವೆಳಕಿನ ಸೊನೆಯ ಚಂದ್ರ- ನಾದನು ಕಪ್ಪಿಡಿದ ಲಾಂದ್ರ ಪವನವಾಯ್ತು ತಾಮ್ರದ ವೈ ಕತ್ತಲೆಯೇ ಎತ್ತಿದ ಕೈ. ಮರುಳೆಂದವು – ಸೈ, ಸ...

1...78910

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...