ಎಲ್ಲಿಯದೋ ಒಂದು ಧ್ವನಿ ಅನುರಣುಸುತ್ತಿದೆ, ಎದೆಯ ಆಳದಲಿ ನಿತ್ಯ ನೂತನದ ತಂಗಾಳಿಯ ಅಲೆಗಳು ಅಪ್ಪಳಿಸಿವೆ ನದಿಯ ದಂಡೆಯಲಿ. ಕೇದಿಗೆ ಅರಳಿ ಘಮ್ಮೆಂದು ಸೂಸಿದ ಪರಿಮಳ ಎಲ್ಲೆಲ್ಲೂ ಹರಡಿ ನದಿಗುಂಟ ಹರಿದು ಮೂರು ಸಂಜೆಯ ಹೊತ್ತು ನೀಲಾಂಜನದ ಬೆಳಕು ಹರಡಿದ ...

ನಮ್ಮ ನೆಲವಿದು ಕನ್ನಡ ನಮ್ಮ ಜಲವಿದು ಕನ್ನಡ ನಮ್ಮ ನಾಡಿದು ಕನ್ನಡ ಕನ್ನಡ ಕನ್ನಡ || ಶಿಲ್ಪ ಕಲ್ಪತಲ್ಪವಲ್ಲಿ ಅಂದ ಚೆಂದ ಒಲ್ಮೆಯಲಿ ಒಲುಮೆ ಚಿಲುಮೆ ನಲುಮೆ ತಂಗಾಳಿಯಲಿ ತಂಪ ಸೂಸಿ ಇಂಪಾಗಿ ಕೇಳ ಬರುವ ಕನ್ನಡ || ಸುಂದರ ಸುಮಧುರ ಕನ್ನಡ ಗಿರಿಧಾಮಗಳೆ...

ದೇವಿ ನೀನು ಈ ಜಗವನ್ನ ಆಡಿಸುವಾಕೆ ನೀನೇ ಮಾಯೆ ಸಕಲ ಜೀವಾತ್ಮಗಳ ತಾಯೆ ನೀನೇ ಕಾಯ ಮೋಡಗಳ ಮರೆಯಲಿ ಚಂದ್ರ ಅವಿತರೆ ಇಲ್ಲವಾದನೇ ರಾತ್ರಿಯ ಕತ್ತಲಿನಲಿ ಸೂರ್‍ಯ ಕಾಣದಾದರೆ ಕರಗಿದನೇ ಹುಚ್ಚು ಭ್ರಮೆಗೆ ಮನುಜ ಲೋಕವೆ ಸತ್ಯವೆಂದಿಹನು ಉಸಿರು ನಿಂತರಾಯ್ತು...

ಶಂಕರರಾಯನಿಗೆ ಪುನಹೆಯ ಡಾಕ್ಟರುಗಳು ಮಾಡಿದ ಚಿಕಿತ್ಸೆಯಿಂದ ಸ್ವಲ್ಪವೂ ಗುಣವಾಗಲಿಲ್ಲವೆಂದು ಹಿಂದೆಯೇ ಹೇಳಿದ್ದೇವಷ್ಟೆ. ಅತನ ರೋಗದಸಮಾಚಾರವು ಗವರ್ನರ` ಸಾಹೇಬನಿಗೆ ಮುಟ್ಟಿ ಆತನು ತನ್ನ ಸ್ವಂತ ವೈದ್ಯನಾದ ಕಾಕ್ಸ್ ಎಂಬುವನನ್ನು ಕಳುಹಿಸಿ ಕೊಟ್ಟನು. ...

ಒಳುಬೇರಿನಲ್ಲೆ ಕಡುಬೇರೆಯಾಗಿ ಚೊಕ್ಕಾದ ರೂಪವಾಂತು ವರ ಬೇಡಿಕೊಂಬ ಸ್ಥಿರಲಗ್ನ ಬಂತು ಹತ್ತಿರಕೆ ಹೊತ್ತು ಬಂತು ಹೇ ದೊರೆಯೆ ನಿನ್ನ ವಿಜಯಕ್ಕೆ ತಕ್ಕ ಮತಿಯೇರುವಂತೆ ಮಾಡು ಸಟಿ ತಳ್ಳಿ ನಿನ್ನ ದಿಟದಲ್ಲಿ ಮೂಡಿ ಬರುವಂಥ ಬಲವ ನೀಡು *****...

ಕುಣಿ ಕುಣಿ ಹಣವೇ ಝಣಝಣಾ! ಮಾಡುವೆ ಹಬ್ಬಾ ದಿನಾದಿನಾ! ಘಿಲ್ ಘಿಲ್ ಥಕ್‌ಥಕ್ ಥೈ!….. ಬಿಲ್ಲಿಗೆ ಮೂರೇ ಪೈ! ರಾಣಿಯ ಕಾಲಿಗೆ ಪಿಲ್ಲಿ…. ಆಣೆಗೆ ನಾಲುಕು ಬಿಲ್ಲಿ ! ನವಿಲಿನ ಕುಣಿತವು ಕಾಣೇ…. ಚವಲಿಗೆ ಎರಡೇ ಆಣೆ ! ಭಾವ ಬಂದರೆ ...

ಅಣ್ಣ ಎನ್ನ ಬಸವಣ್ಣ ಕಲ್ಯಾಣ ಬಸವಣ್ಣ| ಕ್ರಾಂತಿಯೋಗಿ ಬಸವಣ್ಣ|| ಕಾಯಕಯೋಗಿ ಬಸವಣ್ಣ ಕರ್ಮಯೋಗಿ ಬಸವಣ್ಣ| ಕರುಣಾಳು ಬಸವಣ್ಣ ಅಂತರಂಗ ಬಹಿರಂಗಶುದ್ಧಿ ಬಸವಣ್ಣ ನಮ್ಮಯ ಆತ್ಮೋದ್ಧಾರಿ ಬಸವಣ್ಣ|| ತನುವ ದೇಗುಲ ಮಾಡಿ ಶಿರವ ಹೊನ್ನ ಕಳಸವಮಾಡಿ ಆತ್ಮಲಿಂಗವ...

ನನಗೂನೆ ಯೆಂಡಕ್ಕು ಬಲಬಲೆ ದೋಸ್ತಿ. ಕುಡದ್ ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ. ನಂಗ್ ಎಸರು ಯೋಳ್ತಾರೆ-ರ್ರರ್ರರ್ರರ್ರರ್ರತ್ನ. ನಾನ್ ಆಡೋ ಪದಗೋಳು ಯೆಂಡದ್ ಪ್ರಯತ್ನ. ೧ ಮಾಬಾರ್‍ತ ಬರೆಯಾಕೆ ಯಾಸಂಗ್ ಇನಾಯ್ಕ ಸಿಕ್ದಂಗೆ ನಂಗ್ ಒಬ್ಬ ಬೇವಾರ್‍ಸಿ...

ಹೆಣ್ಣು ಎಲ್ಲಾ ಕೆಡುಕಿನ ಮೂಲ – ಮಹಾಭಾರತ ಹೆಣ್ಣು ಪಾಪಿ, ಗುಲಾಮಳು – ಭಗವದ್ಗೀತೆ ಸಧ್ಯ, ನಾನು ಹೆಣ್ಣಾಗಿ ಹುಟ್ಟಲಿಲ್ಲ – ಪ್ಲೇಟೋ ಇಂದು ಮನೆಯಲ್ಲಿ ದೀಪ ಹಚ್ಚುವುದು ಬೇಡ, ಹೆಣ್ಣು ಹುಟ್ಟಿದೆ – ಜೂ ಜನಾಂಗ ಎಲ್ಲಾ ಪ್...

ಊರ ಮುಂದಿನ ಬಯಲಿನಲ್ಲಿ ಇಹುದು ನಮ್ಮ ಶಾಲೆ ಇದರ ಸುತ್ತ ಹಳ್ಳಿಯ ಜನರು ಮಾಡುತಿಹರು ಕೊಳೆ ಚಿಕ್ಕದಾದ ಹಳೆಯ ಕೆಂಪು ಹೆಂಚು ಹಾಕಿರುವುದು ಬೇಲಿ ಇಲ್ಲ ಬಯಲು ಜಾಗ ಕತ್ತೆ ಸಂತೆ ನೆರೆವುದು ತರಗತಿ ಇರುವವು ನಾಲ್ಕೇ ನಾಲ್ಕು ಮೇಷ್ಟ್ರು ಮಾತ್ರ ಒಬ್ರೆ ಹೇಳ...

1...34567...15

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...