ಒಲವೇ ನನ್ನೊಲವೇ ಕಣ್ಣಲ್ಲಿ ಕಾಡಿರುವೆ ನೂರೊಂದು ಕನಸಾಗಿ ಬಾಳೆಲ್ಲ ತಬ್ಬಿರುವೆ |ಪ| ಇನ್ನು ಏಕೆ ಇಲ್ಲ ಮಾತು ಒಲವು ಕಾಣದೆ ಹೃದಯ ಒಡೆದು ತರಲೆ ಹೇಳೆ ಕೋಮಲೆ || |ಅ.ಪ| ಕನಸು ನೀನು ಕವನ ನೀನು ಅದನೆ ಬರೆವೆ ನೀನು ನಿನ್ನ ಹೊರತು ಯಾವ ಮಾತು ಕಲಿತಿಲ್ಲ...

ಧಗೆಯ ಒಡಲು ಈ ಧಾರಿಣಿಯ ಮಡಿಲು ಕ್ಷಮಯಾ ಧರಿತ್ರಿ ಎಂಬುದೆಲ್ಲಾ ಹಸಿ ಹಸಿಸುಳ್ಳು, ಬೇಯುತ್ತಿರುವ ಒಡಲ ಬೆಂಕಿಯ ಹಳದಿ ನೀರಾಗಿ ಉಗುಳುತ್ತಾಳೆ. ನನ್ನ ಮೇಲಿನ ಹಸಿರು ಬರೀ ತೋರಿಕೆ ಎಂದು ಸ್ಪಷ್ಟವಾಗೇ ಬೊಗಳುತ್ತಾಳೆ. ಆದರೂ ಇವಳಿಗಂಟಿ ತಾವೂ ತಿರುಗುತ್ತ...

ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ ಮಗಳಿಗಾಗಿ ಅಳಬೇಕೋ ಇಲ್ಲ ಚಿಕ್ಕ ಹಸುಳೆಗಾಗಿ ಮರುಗಬೇಕ...

ಸೂರ್ಯನ ಧಗೆಯ ಪ್ರತಿಫಲ ಆಗುವುದು ಆವಿ ಧರೆಯ ಜಲ ಸೇರುವುದು ನೋಡಾ ವಾಯು ಮಂಡಲ ಆವಿ ಏರೇರಿ ಮೇಲೇರಿ ಒಡಲ ಕರಿ ಮೋಡ ಸಾಂದ್ರೀಕರಿಸಿ ತಂಪಾದ ಮೋಡಗಳೆಲ್ಲಾ ಮೇಲೈಸಿ ಮಿಂಚು ಕೋಲ್ಕಿಂಚು ಸಿಡಿಲುಗಳಾರ್‍ಭಟಿಸಿ ಭರದಿ ಇಳೆಗೆ ಮಳೆ ಸುರಿಸಿ ಧರೆಯ ಒಡಲೆಲ್ಲಾ ...

ಗುಡ್ಡ ಬೆಟ್ಟಗಳ ಏಳುಬೀಳುಗಳ ಹಾಗೆ ನಮ್ಮ ಮನಸ್ಸು. ಉಕ್ಕಿ ಹರಿವ ಸಮುದ್ರದ ಅಲೆಗಳ ಹಾಗೆ ನಮ್ಮ ಭಾವ. ಗಿರಿಗಳೊಳಗಿನ ಕಂದರಗಳ ಹಾಗೆ ನಮ್ಮ ಹೃದಯ. ಜುಳು ಜುಳು ಹರಿವ ನೀರಿನ ಹಾಗೆ ನಮ್ಮ ಪ್ರೀತಿ. ಧಗ ಧಗ ಉರಿವ ಬೆಂಕಿಯ ಹಾಗೆ ನಮ್ಮ ದ್ವೇಷ. ಎಲ್ಲರೊಳಗೂ...

ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು ನಿನ್ನನೊಲಿದಿಲ್ಲ, ಏಕೆಂದರಾಕಣ್ಣುಗಳು ಒಂದು ಸಾವಿರ ತಪ್ಪ ನಿನ್ನಲ್ಲಿ ಕಾಣುವುವು; ಆದರವು ಒದ್ದುದನು ಈ ಹೃದಯ ಒಲಿಯುವುದು, ಕಂಡು ಕಂಡೂ ನಿನ್ನ ಬಯಸುವುದು ಮರುಳಿನಲಿ, ನನ್ನ ಕಿವಿಗಳಿಗೆ ಹಿತವೆನ್ನಿಸದು ನಿನ್ನ...

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ ಕಲ್ಲೇಗೌಡನೂ ಕರಿಯಪ್ಪನೂ ಜನಾರ್ದನಪುರದಲ್ಲಿ ಎರಡು ದಿನಗಳಿದ್ದು ತಂತಮ್ಮ ಊರುಗಳಿಗೆ ಹಿಂದಿರುಗಿದರು. ಸಿದ್ದಪ್ಪ ತಮಗೆ ಪ್ರತಿಕಕ್ಷಿಯಾಗಿದ್ದಾನೆಂದೂ, ದಿವಾನರಿಗೆ ತಮ್ಮ ವಿಚಾರಗಳನ್ನೆಲ್ಲ ಅವನು ತಿಳಿಸಿದ್ದಾನೆಂದ...

೧ ತಲೆತಲಾಂತರದಲ್ಲಿ ನುಗ್ಗಿ ಹರಿದು ಹಾರಿ ತೇಲಿಬರುತಿದೆ ಹೆಸರುಹೊತ್ತು ಇದು ಗಂಡಸರ ಜಗತ್ತೆಂದು ಗಂಡಸಾಕಾರದ ಮುಖವಾಡಗಳಿಗೆ ನಾವೇ ಇಟ್ಟ ಮರ್‍ಯಾದೆಯ ಹೆಸರುಗಳು ಅಜ್ಜ, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ, ತಮ್ಮ ಮಾವ, ಮೈದುನ, ಗೆಳೆಯ, ಪರಿಚಿತ, ...

12345...15

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...