ಗುಡ್ಡ ಬೆಟ್ಟಗಳ
ಏಳುಬೀಳುಗಳ ಹಾಗೆ
ನಮ್ಮ ಮನಸ್ಸು.
ಉಕ್ಕಿ ಹರಿವ ಸಮುದ್ರದ
ಅಲೆಗಳ ಹಾಗೆ
ನಮ್ಮ ಭಾವ.
ಗಿರಿಗಳೊಳಗಿನ
ಕಂದರಗಳ ಹಾಗೆ
ನಮ್ಮ ಹೃದಯ.
ಜುಳು ಜುಳು ಹರಿವ
ನೀರಿನ ಹಾಗೆ
ನಮ್ಮ ಪ್ರೀತಿ.
ಧಗ ಧಗ ಉರಿವ
ಬೆಂಕಿಯ ಹಾಗೆ
ನಮ್ಮ ದ್ವೇಷ.
ಎಲ್ಲರೊಳಗೂ ಒಂದೇ ರೀತಿ.
ಆದರೆ,
ಮನುಜ ಮನುಜರೊಳಗೆ
ಎಷ್ಟೊಂದು ಭಿನ್ನ ರೀತಿ!
ಒಬ್ಬರಂತೆ ಇನ್ನೊಬ್ಬರಿಲ್ಲ
ಇದು ಸೃಷ್ಟಿ ವೈಚಿತ್ರ್ಯ.
ಜೀವನಕೆ ರಂಗು ತುಂಬುವ
ಪ್ರತ್ಯೇಕತೆಯ ವೈವಿಧ್ಯ!
*****