ಭಾರತಕ್ಕೆ ಬಂದಿತಂತೆ ಸ್ವಾತಂತ್ರದ ಹುಣ್ಣಿವೆ, ಕನ್ನಡಿಗರಿಗೇನಿದೆ, ಬರಿ ಕಂಬನಿಗಳ ಕಣ್ಣೆವೆ! ೧ ಈ ಹಬ್ಬದ ಬಯಕೆಯಿಂದ ನಾವು ದುಡಿದುದೆಷ್ಟು! ‘ಹಬ್ಬ ಬಹುದು, ಬಹುದು!’ ಎಂದು ಹಿಗ್ಗಿ ಮಿಡಿದುದೆಷ್ಟು! ಆದರೇನು? ಇಲ್ಲ ನಮಗೆ ಸುಖವು ಎಳ್ಳಿನಷ್ಟು- ಭಾ...

ಚಿಂತಿಸದಿರು ಮನವೇ ಜನರ ವಿಪರೀತವ ಕಂಡು ಕುಗ್ಗದಿರು ಜೀವವೆ ಈ ಜಗತ್ತು ವೇಗದಲಿ ಬದಲಾಗುವುದಕೆ ನೊಂದು|| ಜಗ ಓಡುತಿಹುದು ನಾಗಾಲೋಟದಲಿ ಹೊಸ ಹೊಸ ತಂತ್ರಜ್ಞಾನದ ಜೊತೆಯಲಿ| ಜನರೋಡುತಿರುವರು ಕಾಲಸಮಯದಿಂದೆ ಹಣಗಳಿಸುವ ಭರಾಟೆಯಲಿ| ಮರೀಚಿಕೆಯ ಕಂಡು ನಿಜ...

ಮರಗಳು ಮಾತಾಡುತ್ತವೆ ಮನುಷ್ಯರಲ್ಲ ಎಲೆಗಳು ಅಲೆದಾಡುತ್ತವೆ ನೆಮ್ಮದಿಯಿಲ್ಲ. ನಾಲಗೆ ನಂಬದ ನೆಲದಲ್ಲಿ ತೆನೆಗಳು ತುಂಬಿದ ತಲೆಯಲ್ಲಿ ಹೂಗಳು ಅರಳದ ಎದೆಯಲ್ಲಿ ಸತ್ತವು ಮಾತು ಮನುಷ್ಯರಲ್ಲಿ. ಮರುಕ ಹುಟ್ಟಿತು ಮರಗಳಿಗೆ ಕೊಂಬೆ ಚಾಚಿದವು ನಂಬಿ ನಕ್ಕವು ...

ಯಾವುದೇ ಜೀವಂತ ಸಂಸ್ಕೃತಿಗೆ ಎಲ್ಲಾ ಕಾಲದಲ್ಲಿಯೂ ಸವಾಲುಗಳು ಇದ್ದದ್ದೇ. ಅದು ಸಹಜ ಮತ್ತು ಸ್ವಾಭಾವಿಕ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕನ್ನಡಕ್ಕೂ ತನ್ನ ಎಲ್ಲಾ ಕಾಲಗಳಲ್ಲಿಯೂ ಸವಾಲುಗಳು ಇದ್ದವು ಮತ್ತು ಅವು ಇಂದಿಗೂ ಇವೆ. ಇಂತಹ ಸವಾಲುಗಳನ್...

ಜಂಭದ ಹುಂಜವು ಒಂದಿತ್ತು ನಿತ್ಯವು ಕೊ ಕೊ ಕೊ ಎನ್ನುತ್ತಿತ್ತು ಸೂರ್ಯ ಹುಟ್ಟುವುದೇ ನನ್ನಿಂದ ಎಂದೆನ್ನುತ್ತಿತ್ತು ಗರ್ವದಿಂದ ಜಗಳಗಂಟ ಹುಂಜವದು ಸದಾ ಜಗಳ ಕಾಯುತ್ತಿತ್ತು ಉಳಿದ ಕೋಳಿಗಳು ಹೆದರಿ ಪಾಪ ಹಾಕುತ್ತಿದ್ದವು ಹಿಡಿ ಹಿಡಿ ಶಾಪ ಈ ರಾಜ್ಯಕೆ ...

(೧೫-೮-೪೭) ಆ ಮಹಾತ್ಮರ ತಪವೊ ಭಕ್ತಿಭಾವದ ಗುಣವೊ ಭಾರತಿಯ ಕಣ್ಣೀರೊ ಉಳಿದವರ ಹಸಿವೊ ಜವಾಹರ ವಲ್ಲಭರ ರಾಜೇಂದ್ರ ಮೌಲನರ ನಿರುತ ಪೌರುಷವೆನಲು ಬಂದುದೀ ಬೆಳಕು. ನಿರುತ ತಾರುಣ್ಯದಲಿ ರಂಜಿಸುವ ಭಾರತಿಯು ಪರತಂತ್ರ ಬಂಧನದಿ ಮುದುಕಿಯಂತಾಗಿ ಇನ್ನೊಮ್ಮೆ ಸ...

ಫ್ಯಾಶನ್ ಶೋ, ರಿಯಾಲಿಟಿ ಶೋ ಟಿ.ವಿ. ಇಂಟರ್‌ನೆಟ್, ಚಾಟುಗಳಲ್ಲಿ ಮಗ್ನರಾಗಿ ಫಾಸ್ಟ್‌ಫುಡ್ ನೆಕ್ಕುವ ಐಷಾರಾಮಿ ಬಂಗಲೆ ವಾಸಿಗಳೇ ರಕ್ತದಲ್ಲಿ ಅದ್ದಿದ ರೊಟ್ಟಿ ತಿನ್ನಲು ನಿಮಗೆ ಸಾಧ್ಯವಾಗುವುದಾದರೆ ಹೇಳಿ? ಸೋದರಿ ಇರೋಮ್ ಶರ್ಮಿಳಾ ಯಾರೆಂದು ಗೊತ್ತೆ...

ಆ ತರ ಅವನು ಈ ತರ ಇವನು ನಾನೂ ನೀನೂ ಬೇರೆ ತರ ಎಲ್ಲರು ಒಂದೇ ತರ ಇರುತಿದ್ದರೆ ಎಂಥಾ ಬೇಸರ ಇರುತಿತ್ತೋ ಒಂದೇ ಎತ್ತರ ಒಂದೇ ನಿಲುವು ಒಂದೇ ಬಣ್ಣ ಒಂದೇ ಕಣ್ಣ ಎಲ್ಲರು ಒಂದೇ ತರ ಇರುತಿದ್ದರೆ ಎಂಥಾ ಬೇಸರ ಇರುತಿತ್ತೋ ಒಂದೇ ಭಾಷೆ ಒಂದೇ ಧರ್‍ಮ ಒಂದೇ ದ...

ಹಾವಿನ ವಿಷವನ್ನು ಹೊರತೆಗೆಯಲು ಹಾವಿನ ವಿಷದ ಔಷಧಿಯನ್ನು ಬಳೆಸುವ ವೈದ್ಯಕೀಯ ವಿಜ್ಞಾನ ಬೆಳೆದು ಬಂದಿದೆ. ಆದರೆ ಈ ಹಾವಿನ ವಿಷದಿಂದಲೇ ‘ಅಗ್ರಾಸ್ಟಾಲ್’ ಎಂಬ ಮಾತ್ರೆಗಳನ್ನು ತಯಾರಿಸಲಾಗುತ್ತದೆ. ಈ ಹಾವಿನ ವಿಷದ ಮಾತ್ರೆಗಳು ರಕ್ತನಾಳಗಳಲ್ಲಿ ಹೆಪ್ಪು...

`ಇರುವ ಹಲ್ಲುಗಳೆಲ್ಲಾ ಉದುರಿಸುತ್ತೇನೆ’ ಜೋರಾಗಿ ಗದರಿದ್ದರು ಕೋಪದಲಿ. ಡೆಂಚರ್ ಕೈಲಿ ಹಿಡಿದು ನಗು ಬೀರಿದೆ ಕೋಪ ಮಾಯವಾಗಿ ಅವರೂ ನಕ್ಕರು! *****...

1...7891011...16

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...