ಯೌವನವೆಂದರೇ ಹೀಗೆ ಹೂ ಬಿಟ್ಟ ಮರದ ಹಾಗೆ ಹುಚ್ಚು ಹುರುಪು ನೂಕು ನುಗ್ಗಲು ಕಾಯನ್ನು ಹಿಸುಕಿ ಹಣ್ಣು ಮಾಡುವ ಒಕ್ಕಲು ಸಮಯವಿಲ್ಲ ಯಾವುದಕ್ಕೂ ಧಾವಿಸುತ್ತಿರು ಮುಂದೆ ಕೈ ಜಾರಿ ಹೋದೀತು ತಡಮಾಡಿದರೆ ನಿಲ್ಲದಿರು ಹಿಂದೆ...
ಕೆಲದಿನಗಳ ಕಾಲ ಮಂಜುಳಾ ಮೌನ ಮುಂದುವರೆಯಿತು. ಶಿವಕುಮಾರ್ ಹೆಚ್ಚು ಮಾತನಾಡುವ ಆಸಕ್ತಿ ತೋರಿಸಿದರೂ ಆಕೆ ಅಷ್ಟು ಉತ್ಸಾಹ ತೋರಲಿಲ್ಲ. ಅವಳಲ್ಲಿ ಒಂದು ಬಗೆಯ ಖಿನ್ನತೆ ಆವರಿಸಿತ್ತು. ರಾಜಕುಮಾರಿಯ ಹುಚ್ಚು ಮುಖದ ಹಿಂದಿನ ಮುಖಗಳ ಪರಿಚಯವಾದ...