ಕೊಳದೊಳಗಣ ಚಂದ್ರನನು ಆನೆ ಮೆಟ್ಟಿತು ನರಕದ ಬಾಗಿಲನು ತಾನೆ ತಟ್ಟಿತು ಬ ಒಳಗೆ, ನನ್ನೊಳಗೆ ಎಂದಿತು ಕೊಳದ ಕೆಸರು ನೇವರಿಸಿತು, ಆವರಿಸಿತು ಅಡಗಿತು ಆನೆಯ ಉಸಿರು ಆನೆ ಘೀಳಿಟ್ಟಿತು ದಶದಿಕ್ಕಿಗೂ ಮೊರೆಯಿಟ್ಟಿತು ಕರುಣೆಯಿಂದಲೇ ಇದಿರುಗೊಂಡವು ಕೇಡಿಗನನ...

ನಾಗೇಶ ಯಾರೂ ಇಲ್ಲದಾಗ ಕರುಣಾಜನಕ ದನಿಯಲ್ಲಿ ತನಗೆ ಹರಿ ಮಾಡಿದ ಅವಮಾನವನ್ನು ವಿವರಿಸಿದ್ದ. ಅದು ಅವಮಾನವಲ್ಲವೆಂದು ಅಂತಹ ಪರಿಸ್ಥಿತಿಗಳಲ್ಲಿ ಹಾಗೇ ಮಾಡಬೇಕಾಗುತ್ತದೆ ಎಂಬುವುದನ್ನು ವಿವರಿಸುತ್ತಾ ಇನ್ನೂ ಅವನು ಏನೇನು ಕಲಿಯಬೇಕೆಂಬುವುದನ್ನು ಹೇಳಿದ...

ದೇವರು ಯಾವಾಗ ಹುಟ್ಟದನೋ ಯಾರಿಗೂ ಗೊತ್ತಿಲ್ಲ; ಎಲ್ಲರನ್ನೂ ಹುಟ್ಟಿಸಿದ ದೇವರನ್ನು ಯಾರೂ ಹುಟ್ಟಿಸಲಿಲ್ಲ. ಅಥವಾ ಆತ ಸ್ವಯಂಭೂ. ಹುಟ್ಟದ ದೇವರಿಗೆ ಮರಣವೂ ಇಲ್ಲ. ಆದ್ದರಿಂದ ದೇವರು ಅನಾದಿ, ಅನಂತ್ಯ ಎನ್ನುತ್ತೇವೆ. ದೇವರು prime mover; ಆತನೇ ಮುಖ...

ದೂಡಿದರೆ ನನ್ನನ್ನು ಸರಳುಗಳ ಹಿಂದೆ ಕಾಣುವುದು ನೀವೇ ಸರಳುಗಳ ಹಿಂದೆ – ನನಗೆ ಕಾಣುವುದು ನೀವೇ ಸರಳುಗಳ ಹಿಂದೆ || ಬದುಕು ಒಂದು ಆಟ ಆಡಿ ನಲಿಯಬೇಕು ಆಡಿ ನಲಿಯದಿರಲು ನೋಡಿ ನಲಿಯಬೇಕು ಸಂಚು ಹೊಂಚು ಏಕೆ? ನಾ ಬರಿಯ ದೇಹವಲ್ಲ ಕೊಲ್ಲಬಹುದು ಕೊ...

ಹರಿವ ತೊರೆಯ ಅಲೆಅಲೆಗಳಲಿ ನಿನ್ನ ಭಾವ ನರ್ತನ || ತುಡಿವ ಮನಗಳ ಜಾಲದಲಿ ತಣಿವು ಎರೆಯುವ ಚೇತನ || ಸೃಷ್ಟಿ ಸೊಬಗಿನ ಇಳೆಯರಂಗದಲಿ ಪ್ರಕೃತಿ ದೇವಿಯ ನರ್ತನ || ಅರಳು ಮಿಡಿಯುವ ವೀಣೆ ಕೊರಳಲಿ ಉಲಿವ ಗಾಯನ ನೂತನ || ಉದಯ ಕಾಲದ ಬಾನಿನೊಡಲಲಿ ನೂರು ರೂಪ ...

ಬೆಳಿಗ್ಗೆ ಪ್ರಗತಿಶೀಲರ ಸಭೆಯಲ್ಲಿ ಎಚ್ಚರಿಸಿದರು ಕವಿ : “ಬಾನು ಭೂಮಿ ಒಂದೆ ಸಮ, ಹಳ್ಳ ಕಡಲು ಒಂದೆ ಸಮ ಒಂದೆ ಸಮ ಒಂದೆ ಸಮ, ಕೊರಡು ಮರ ಒಂದೆ ಸಮ” ಗುಡುಗಿದರು ಕವಿ ಮಧ್ಯಾಹ್ನ ಮೈಸೂರಿನ ಕುಕ್ಕೂಟ ಸಭೆಯಲ್ಲಿ : “ವೈದಿಕ ಸಂಸ್ಕ...

ಬಸವಣ್ಣ ಬಸವಯ್ಯ ಬಸವೇಶ ಶರಣು ನಿನ್ನ ನುತಿಸುವ ಭಾಗ್ಯ ಸವಿಹಾಲು ಜೇನು || ಪ || ಶರಣರು ಕವಿಗಳು ಹೊಗಳಿದರು ನಿನ್ನ ಅವರ ಜಾಡನೆ ಹಿಡಿದು ಹಾಡುವೆನು ಚೆನ್ನ || ಅ.ಪ. || ಕಲ್ಯಾಣ ಪಣತೆಗೆ ಭಕ್ತಿ ತ್ಯೆಲವೆರೆದು ದೀಪ ಹೊತ್ತಿಸಿ ನೀನು ಬೆಳಕಾಗಲು ನೂರಾ...

ವ್ಯಾಕರಣ ಶಿರೋಮಣಿ ರಣಾರಣ ಶ್ರೀ ಕೂ ಮಂ ಭಟ್ಟರು ರಚಿಸಿದರು ಒಂದು ಕಾವ್ಯ ಜನಿವಾರದಿಂದ ವೃತ್ತಗಳ ಹಾಕಿ ಶಿವಲಿಂಗದಿಂದ ಮಾತ್ರೆಗಳ ತೂಗಿ ಕರ್ಮರ ಬ್ರಾಹ್ಮಣನ ಮಮ್ಮಟ ಕಾವ್ಯ ದಿವಿನಾಗಿ ಬಂತು ಪರಂಪರೆಯ ಹವ್ಯ ಕವ್ಯ ಮಟಮಟ ಮಧ್ಯಾಹ್ನ ಮೂಗು ತುದಿಯಿಂದ ಬೆ...

1...56789...111

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...