ಆ ಕಣ್ಣು ನೀರು ನೆಲ ಆಕಾಶ ತನ್ನಲ್ಲೆ ಅಂದಿತು ಆ ಕಣ್ಣು ಮೋಹ ಮದ ಮತ್ಸರ ತನ್ನಲ್ಲೆ ಅಂದಿತು ಆ ಕಣ್ಣು ಕ್ರಿಮಿ ಕೀಟ ಪಶು ಪಕ್ಷಿಗೆ ಕನ್ನಡಿ ತಾನೆಂದಿತು ಆ ಕಣ್ಣು ಹುಟ್ಟು-ಸಾವು ತನ್ನಲ್ಲೆ ಎಂದಿತು ಆ ಕಣ್ಣು ಜಗತ್ತು ತಾನೆಂದಿತು ೨ ಧಗ ಧಗ ಧಗ ಧಗ ಉರ...

ನಮ್ಮ ದೇಶದಲ್ಲಿ ನಡೆಯುತ್ತಿರುವ ಅನಾರೋಗ್ಯಕರ ಘಟನೆಗಳಿಗೆ ಮಿತಿಯೇ ಇಲ್ಲವೇನೋ ಎಂಬ ಆತಂಕದಿಂದ ಸಂಕಟದ ಸುಳಿಯೇಳುತ್ತದೆ. ಇಲ್ಲಿ ಅರಳುವ ಹೂವುಗಳು, ಹರಿಯುವ ನದಿಗಳಿಗೆ, ಬೆಳೆಯುವ ಮರಗಳಿಗೆ ಇನ್ನು ಮುಂದೆ ಜಾತಿ ಮತ ಧರ್ಮಗಳ ಸೋಂಕು ತಗುಲಿ ಹಿಂದೂ ಹೂವ...

ಬೀದಿ ಗುಡಿಸುವ ಆ ಹುಡುಗಿ ಬಯಲಲ್ಲಿ ಬುಟ್ಟಿ ಕಟ್ಟುವ ಪಾರಿಜಾತ ಬೆಳ್ಳಂಬೆಳಿಗ್ಗೆ ಕಣ್ಣ ತುಂಬೆಲ್ಲಾ ಕನಸು ಹೊತ್ತು ಕಸವ ರಸ ಮಾಡುತ್ತಾ ಪಾದಕ್ಕೆ ಚುಚ್ಚಿದ ಪಿಂಗಾಣಿ ಗಾಜುಗಳ ಮೆಲ್ಲಗೆ ಸವರಿ, ಮುಖ ಕಿವಿಚಿ ಸರಕ್ಕನೇ ಎಳೆದು ಬಿಡುತ್ತಾಳೆ. ಅವಳ ಮನ ದ...

ಅಧ್ಯಾಯ ೫ ಸೊಸೆಯ ದೂರು ಮನೆಗೆ ಬರುವಷ್ಟರಲ್ಲಿ ಊರಿನಿಂದ ಮನುವಿನ ತಮ್ಮ ರಾಜೀವ್ ಅಮ್ಮನನ್ನು ಕರೆದುಕೊಂಡು ಬಂದಿದ್ದ. ಅತ್ತೆ ಗಾಬರಿಯಾಗುವರೆಂದು ಮನು ಬಿದ್ದ ವಿಷಯ ಅಲ್ಲಿಗೆ ತಿಳಿಸುವುದು ಬೇಡವೆಂದು ತನುಜಾ ತಡೆದಿದ್ದಳು. ಆದರೆ ಹೇಗೊ ವಿಷಯ ತಿಳಿದೊ...

ಪ್ರತಿಯೊಂದು ಯುದ್ಧಮುಗಿದ ಮೇಲೂ ಯಾರಾದರೂ ಮತ್ತೆ ಎಲ್ಲವನ್ನೂ ಅಣಿಗೊಳಿಸಬೇಕು. ಹಾಳಾದದ್ದೆಲ್ಲ ಮತ್ತೆ ತನಷ್ಟಕ್ಕೇ ಸರಿಯಾಗುವುದಿಲ್ಲ ತಾನೇ? ಯಾರಾದರೂ ಬಂದು ರಸ್ತೆ ಮೇಲೆ ಬಿದ್ದ ಕಲ್ಲು ಮಣ್ಣು ಪಕ್ಕಕ್ಕೆ ತಳ್ಳಿ ಹೆಣ ಹೂತ್ತೆಗಾಡಿಗಳು ಸಾಗುವುದಕ್ಕ...

ಮುದ್ದು ಮುದ್ದು ಗೋಪಾಲ ಬಾರೋ ಶ್ರೀಕೃಷ್ಣಲೋಲ ಸದ್ದು ಮಾಡದೆ ಕದ್ದು ಬಾರೋ ಗೋಪಿಕೆಯರ ನಂದಕಿಶೋರ || ಬೆಣ್ಣೆಯ ಕದ್ದು ಬಾಯಲ್ಲಿ ಇಟ್ಟು ಗೆಳೆಯರ ಕೂಡಿ ಓಡಿ ಆಡಿ ನಗುವ ಚಂದ್ರನಂತೆ ನಗಿಸುವ ಬಾರೋ || ಮಣ್ಣನ್ನು ತಿಂದು ಬಾಯಲ್ಲಿ ಅಂದು ಬ್ರಹ್ಮಾಂಡವ ತ...

ನಿದ್ದೆ ತಬ್ಬದ ಇರುಳುಗಳಲ್ಲಿ ಮೇಲಿಂದಿಳಿಯುವ ಉರುಳುಗಳು; ಅರ್ಧ ಎಚ್ಚರದ ಮಂಪರಿನಲ್ಲಿ ಕೊರಳನು ಬಿಗಿಯುವ ಬೆರಳುಗಳು; ಮನಸಿನ ಒಳನೆಲಮಾಳಿಗೆಯಲ್ಲಿ ಪೇರಿಸಿದಾಸೆಯ ಮದ್ದುಗಳು; ಮದ್ದಿನ ಮನೆಯ ಕದವ ಒದೆಯುತಿವೆ ಕೊಳ್ಳಿ ಹಿಡಿದ ಕರಿದೆವ್ವಗಳು. ಚಿತ್ತದ ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...