Month: October 2017

#ಕವಿತೆ

ಹೆಮ್ಮೆ ನನಗೆ ಅಮ್ಮ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಹೆಮ್ಮೆ ನನಗೆ ಅಮ್ಮ ನಿನ್ನ ತಾಯಿಯೆಂದು ಕರೆಯಲು ಕಂದನೆಂಬ ನಿನ್ನ ಪ್ರೀತಿ ಸವಿಯು ಜೇನಿಗಿಂತಲು ಏನು ತಾನೆ ಇದ್ದರೂ ನಿನಗೂ ಸಿರಿವಂತರು? ಬಲ್ಲೆ ನಾನೆ ಇರುವರೆಷ್ಟೋ ನಿನಗೂ ಧೀಮಂತರು; ಬಾಳಿಬಂದ ಗರಿಮೆಯಲ್ಲಿ ಯಾರು ಸಮಕೆ ಬರುವರು? ತಾಳಿ ನಿಂತ ಸಹನೆಯಲ್ಲಿ ನಿನ್ನ ಯಾರು ಗೆಲುವರು? ಪ್ರಾಚೀನ ಎನಿಸಿದರೂ ಚಿರನೂತನೆ ನೀನು ವೇದಮೂಲವಾದ ಜ್ಞಾನ- ಸುಧೆಗೆ ನೀನು […]

#ಕವಿತೆ

ನಮ್ಮವರ ಬಣ್ಣ

0

ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ ಮಹಡಿ ಮನೆಗಳ ಮಂದಿಗೆ ಮೆಟ್ಟಿಲಾಗೈತಿ ದೊಡ್ಡದೊಡ್ಡ ಅಧಿಕಾರಸ್ಥರ ಕಾಲ ಕಸವಾಗೈತಿ ನಮ್ಮವರ ಬಣ್ಣ ಸೋಗಲಾಡಿ ರಾಜಕಾರಣಿಗಳ ಸೊಂಟದ ಲಂಗೋಟಿಯಾಗೈತಿ ನೀತಿ ಹೇಳೋ ಜಾತ್ಯಸ್ತರತಾಕ ಸುತ್ತಿಗೊಂಡು ಬಿದ್ದೈತಿ ಸೂಳೆ ಬಜಾರದಾಗ ಮಾರಾಟಕಿಟ್ಟೈತಿ ನಮ್ಮವರ ಬಣ್ಣ ಹುಡಕಬ್ಯಾಡ್ರೋಽಽಽ ಹುಟ್ಟಿದಾಗಿಂದ ಜಾತಿ ಒಲಿಯಾಗ ಬಡತನದ ಬೆಂಕ್ಯಾಗ ಸುಟ್ಟು ಕರಕಲಾಗೈತಿ ಸಾಯೋಗಂಟ […]

#ಕವಿತೆ

ಚಿಕ್ಕೆಯಾಗಿ ಒಳಗೆ ಹೊಳೆದು

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಚಿಕ್ಕೆಯಾಗಿ ಒಳಗೆ ಹೊಳೆದು ತುಟಿಗೆ ಬಾರದವನೆ, ಮಕ್ಕಳ ನಗೆಗಣ್ಣಿನಲ್ಲಿ ಬಾಗಿಲು ತೆರೆದವನೆ, ಉಕ್ಕುವ ಹೂಚೆಲುವಿನಲ್ಲಿ ಸೊಕ್ಕುವ ತೆನೆ ಪಯಿರಿನಲ್ಲಿ ಸಿಕ್ಕಿದಂತೆ ನಟಿಸಿ ಸಿಗದೆ ಎಲ್ಲೋ ಸಾಗುವವನೆ! ಆಡುವ ಮಗು ಓಡಿ ಬಂದು ತೊಡೆಯನೇರಿದಾಗ, ಗೂಡ ನೆನೆದು ಗಿಳಿಯ ಹಿಂಡು ಕೂಗುತ ಬರುವಾಗ, ತಾಯಿಯ ಸಿರಿನಗೆಯಲಿ ಮರಿಗಳ ಚಿಲಿಪಿಲಿಯಲಿ ಸಿಕ್ಕಿದಂತೆ ತೋರಿ ಆಹಾ! ಸಿಗದೆ ಸಾಗುವವನೆ! ಒಲಿದ […]

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೪೫

0

ನಾನಂದುಕೊಂಡಷ್ಟು ದಕ್ಕಲಿಲ್ಲ. ದಕ್ಕಿದ್ದೆಲ್ಲ ನನ್ನದಾಗಲಿಲ್ಲ. *****

#ಕಾದಂಬರಿ

ಇಳಾ – ೭

0

ಪ್ರತಿನಿತ್ಯ ಪತ್ರಿಕೆಯಲ್ಲಿ ರೈತರ ಆತ್ಮಹತ್ಯೆ ಅಂತ ನೋಡಿ ನೋಡಿ ಇಳಾಳ ಮನಸ್ಸು ರೋಸಿ ಹೋಗಿತ್ತು. ಯಾಕೆ ಈ ರೈತರು ಇಷ್ಟೊಂದು ಹತಾಶರಾಗಿ ಸಾವಿಗೆ ಮೊರೆ ಹೋಗುತ್ತಾರೆ, ಇದಕ್ಕೇನು ಕಾರಣ? ಇದನ್ನು ತಡೆಯುವ ಮಾರ್ಗ ಯಾವುದು? ಕೃಷಿ ನಂಬಿಕೊಂಡಿದ್ದಕ್ಕೆ ಸಾವೇ ಗತಿಯೇ… ಈ ಬಗ್ಗೆ ಒಂದಿಷ್ಟು ಚಿಂತಿಸುವ ಮನಸ್ಸುಗಳನ್ನೆಲ್ಲ ಒಂದೆಡೆ ಸೇರಿಸಬೇಕು. ಆ ಮೂಲಕ ಏನನ್ನಾದರೂ ಮಾಡಿ […]

#ಕವಿತೆ

ಕೊಲ್ಲದ ಕಾಳೆಗ

0

ಬನ್ನಿರಿ ಬಾಲರೆ ನಡೆಯಿರಿ ಗೆಳೆಯರೆ ನಾಡಿನ ಬಿಡುಗಡೆ ಕಾಳೆಗಕೆ ತನ್ನಿರಿ ನಿಮ್ಮ ಕಪ್ಪ ಕಾಣಿಕೆಯ ಭಾರತ ಮಾತೆಯ ಓಲಗಕೆ! ಸತ್ಯದ ಕುದುರೆಯನೆಲ್ಲರು ಹತ್ತಿ ಹಿಡಿದು ಝಳಪಿಸಿರಿ ಅಹಿಂಸೆ ಕತ್ತಿ ತಿರುಗಿಸಿ ಗಿರ್‍ರನೆ ನೂಲುವ ಚರಕ ಹುಟ್ಟಡಗಲಿ ದಾರಿದ್ರ್‍ಯದ ನರಕ. ಹಿಂದೂ ಮುಸ್ಲಿಮ ಸಿಕ್ಕ ಪಾರಸಿಕ ಜೈನ ಬೌದ್ಧ ಈಸಾಯಿ ಯೆಹೂದ್ಯ ಉಚ್ಚ ನೀಚ ಕುಲ ಸ್ಪೃಶ್ಯಾಸ್ಪೃಶ್ಯ […]

#ಕವಿತೆ

ಮಲ್ಲಿಗೆ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಗುಂಡ್ರು ಮಲ್ಲಿಗೆ ದುಂಡು ಮಲ್ಲಿಗೆ ಬಳ್ಳಿ ತುಂಬ ಕುಂಡ್ರು ಮಲ್ಲಿಗೆ ಯಾರು ನಿನ್ನ ಕಂಡ್ರು ಮಲ್ಲಿಗೆ ಮುಗಿಬಿದ್ದು ತಗೊಂಡ್ರು ಮಲ್ಲಿಗೆ ಸಂತೆಯಲಿ ಸೇವಂತಿ ಮಲ್ಲಿಗೆ ಅರಮನೆಯಲಿ ಎರವಂತಿ ಮಲ್ಲಿಗೆ ಮುಗುಳು ಮಲ್ಲಿಗೆ ಹೊಗಳು ಮಲ್ಲಿಗೆ ನಾಳೆ ನೀನು ಅರಳು ಮಲ್ಲಿಗೆ ಜಡೆ ಜಡೆಯಲಿ ಹೊರಳು ಮಲ್ಲಿಗೆ *****

#ಕವಿತೆ

ವಿಧಿ

0
ಬೆಳಗೆರೆ ಜಾನಕಮ್ಮ
ಜನಕಜೆ
Latest posts by ಜನಕಜೆ (see all)

ತಾರಣ ವರುಷದ ನಾಲ್ಕನೆ ಮಾಸದ ಅಂತ್ಯದ ದಿನವದು ಮುಂಜಾನೆ ಊರಿನ ಜನರಿಗೆ ಹೇಳಲು ತೀರದ ಸಡಗರ ತುಂಬಿದೆ ಬಿಡುವಿಲ್ಲ ದಾನವು ಧರ್ಮವು ದಾಸರ ಪದಗಳು ಸ್ನಾನವು ಜಪಗಳು ನಡೆದಿಹುವು ಏನಿದು ಎಂದರೆ ಬಾಲಕನೊಬ್ಬನು ಕನ್ನಡಿಯೊಂದನು ತೋರಿದನು ಮಸಿಯನು ಪೂಸಿದ ಮುರುಕಿನ ಕನ್ನಡಿ ಕಂಗಳಿಗಿಟ್ಟನು ನೋಡೆಂದು ನೀಲಿಯ ಭವನದಿ ಕಾಂತಿವಿಹೀನದ ಸ್ವಾಮಿಯ ಕಂಡೆನು ಕಾತರದಿ ಧಗಧಗಿಸುವ ಆ […]

#ಕವಿತೆ

ಎರಡು ಹನಿಗಳು

0
ದಲಿತ-ಬಂಡಾಯ ಚಳವಳಿಯ ಕಾಲದಿಂದಲೇ, ಬರವಣಿಗೆಯನ್ನು ಆರಂಭಿಸಿರುವ ಇವರು, ಸಾಕಷ್ಟು ಬರವಣಿಗೆಯನ್ನು ವಿವಿಧ ಪ್ರಾಕಾರಗಳಲ್ಲಿ ಮಾಡಿರುವಂಥವರು.ಇವರ ಕಥೆಗಳು ಕುತೂಹಲಕಾರಿ ಹಾಘೂ ಅಭ್ಯಾಸಪೂರ್ಣ ಯೋಗ್ಯವಾಗಿವೆ.ಒಂದು ವಿಶಿಷ್ಟ ಬಗೆಯ ಪ್ರಯೋಗಗಳನ್ನು - ಭಾಷಿಕ ಪ್ರಯತ್ನಗಳನ್ನು ಮಾಡುವುದರಿಂದ ಇವರ ಕಥೆಯೊಳಗೆ ಒಂದು ಚೈತನ್ಯಶೀಲತೆ ಮತ್ತು ಸಾಂಸ್ಕೃತಿಕ ಬಿಕ್ಕಟುಗಳ ಅನಾವರಣಗೊಳಿಸುವ ಗಂಭಿರ ಪ್ರಯತ್ನವನ್ನು ಕಾಣಬಹುದು.
ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)

ನೀರ ಕುಡಿದಾಗೆಲ್ಲ ನೀ ನೆಪ್ಪಾಗುತ್ತೀಯ! ‘ಅಲ್ಲ’ ಬೀಡು! ನೀ ನಜೀರಸಾಬು- ನೀ ‘ನೀರಸಾಬು!’ * ಈಗೀಗ ಎಲ್ಲರ ಕೈಲಿ ಮೊಬೈಲ್ಲು! ಹಾದಿ ಬೀದಿ ತುಂಬೆಲ್ಲ ಉಚಿತ ಬೈಗುಳು…! *****

#ಕವಿತೆ

ಮತ್ತದೇ ಪ್ರಶ್ನೆ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಚಂದ್ರಾ, ಯಾವಾಗ ನೋಡಿದರೂ ಸದಾ ಮತ್ತದೇ ಪ್ರಶ್ನೆ ನಾನು ಹೆಚ್ಚೋ ಸೂರ್ಯ ಹೆಚ್ಚೋ?  ಸೂರ್ಯ ಹೆಚ್ಚೋ ನಾನು ಹೆಚ್ಚೋ…? ಉತ್ತರಿಸಿ ಸಾಕಾಗಿದೆ.  ನಿನ್ನನ್ನು ಬಿಡುವಂತಿಲ್ಲ ಬಿಡು ಈ ಹೆಚ್ಚುಗಾರಿಕೆಯ ಹುಚ್ಚು ಪಾಪ ನಿನಗೆ ಗೊತ್ತಿರೋದು ಇದೊಂದೆ ಕ್ವಿಜ್ಜು ಕಡೆಯದಾಗಿ ಹೇಳಿಬಿಡುತ್ತೇನೆ ಕೇಳು, ನೀವಿಬ್ಬರೂ ಒಂದೇ ಅವನೊಂದು ಓವೆನ್, ನೀನೊಂದು ಫ್ರಿಜ್ಜು *****