ಪವರ್‌ಕಟ್‌ದ ಒಂದು ಸುಡು ಮಧ್ಯಾಹ್ನ ಹೊರಟೆ ಹುಡುಕಲು ದೇವರ ಉಸಿರಾಟ ಒಂದೂ ಎಲೆ ಅಲುಗಾಡುತ್ತಿಲ್ಲ ಎಲ್ಲಿ ಹೋದನಪ್ಪ ಶಿವ ಒಂದರ ಹಿಂದೊಂದು ಬೈಗುಳ ಉಪಯೋಗಿಸಿ ಬೆವರೊರೆಸಿಕೊಳ್ಳುತ್ತಿದ್ದೆ- ಸೆಲ್ಯುಲಾರ್ ಕನೆಕ್ಟ್ ಆಯಿತೇನೋ ಬಿರುಗಾಳಿಯ ತಿರುಗಣಿ ಬಂದ...

ನನ್ನ ಬುದ್ಧಿ ಶಕ್ತಿಯೆಲ್ಲ ಮಾಯವಾಯಿತು ನಿನ್ನ ದಿವ್ಯ ಪ್ರಭೆಯದೊಂದು ಬೆಳಗಿ ಎದ್ದಿತು ನನ್ನ ತನವು ತಗ್ಗಿ ಕುಗ್ಗಿ ಕೆಳಗೆ ಇಳಿಯಿತು ನಿನ್ನ ಪ್ರೇಮ ತುಂಬಿ ತುಳುಕಿ ಉಕ್ಕಿ ಹರಿಯಿತು ಬಂತು ಬಂತು ಏನೊ ಬಂತು ಹೇಳಲಾರೆನು ಸಾಕು ಸಾಲದಾಗಿ ನಾನು ಸ್ತಬ್ಧ...

ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೆ ಕಾರಿರುಳನು ಸೀಳಿ ಬರುವ ನಿಗಿ ನಿಗಿ ಉರಿಹರಳು ನೀಲಿನಭದ ಹಾಸಿನಲ್ಲಿ ಮಣಿನೇಯುವ ಇರುಳು, ಋತು ಮೀರದೆ ಮುಗಿಲ ಗಡಿಗೆ ಉರುಳಿ ಸುರಿವ ಜಲವು ಎಲ್ಲ ನಿನ್ನ ಲೀಲೆ ತ...

‘ಚಂಪಾ’ಗೆ ಕೇಳಿದೆ: “sun ಪದದ ಕನ್ನಡ ಅನುವಾದ ಹೇಳಿ”. “ಇಗೋ ಬರಕೊಳ್ಳಿ: ‘ಮಿಂಚುಳ್ಳಿ’ ಎಂದು ಹೇಳುತ್ತ ‘ಕನ್ನಡ ಕನ್ನಡ ಬನ್ನಿ ನನ್ನ ಸಂಗಡ’ ಎನ್ನುತ್ತಾ ಮಾಯವಾದರು! *****...

ಕೋಳಿ ಕೂಗದ ಮುನ್ನ, ನಾಯಿ ಬೊಗಳದ ಮುನ್ನ…. ರವಿ ಕಣ್ಣು ಬಿಡದ ಮುನ್ನ… ಇಡೀ ಊರು ಕೇರಿಯೆದ್ದೆದ್ದು ಕುಳಿತಿತು. ಅಂಗ್ಳ ಗುಡ್ಸಿ…. ಸಗಣೀರಾಕಿ, ರಂಗು ರಂಗ್ನಿನ ಸಪ್ತವರ್ಣಗಳಲ್ಲಿ ರಂಗವಲ್ಲಿಯಿಕ್ಕಿ, ತಂಗ್ಡಿ, ಗುರ್ಯಾಳು, ಚಂಡು...

ಹೋದೆಯ ಎಂದರೆ ಗವಾಕ್ಷಿಯಿಂದ ಬಂದೇನೆಂದಿತು ಒಂದು! ಸಕ್ಕರೆ ಡಬ್ಬವ ಕವಚಿ ಹಾಕಿತು ಹಾಲಿನ ಮುಚ್ಚಳ ತೆರೆದು ಬಿಸಾಕಿತು ಬೆಕ್ಕಿನ ಬಾಲವ ಎಳೆದು ನೋಡಿತು ಮನೆಯೊಳಗೆಲ್ಲಾ ಸುಳಿದು ನೋಡಿತು ಶಾಲೆಯಿಂದ ಬಂದ ಪುಟ್ಟನ ಸ್ವರ ಕೇಳಿ ಒಡನೆಯೇ ಅದು ಓಡಿ ಹೋಯಿತು...

ದೇಹ ಗಳಿಯುತ್ತಿರಲು ಮನಕೆ ಯೌವನವಯ್ಯ ಮನಕೆ ಯೌವನವಿರಲು ಆಸೆಗಳು ಹೆಚ್ಚಯ್ಯ, ಸಾಧಿಸುವ ಶಕ್ತಿಗಳು ಭೋಗಿಸುವ ಶಕ್ತಿಗಳು ಕುಂದುತ್ತ ಬರಬರಲು ನೊಂದು ಸಾಯುವೆವಯ್ಯ. ನರೆಸುಕ್ಕುಗಳ ನೋಡಿ ಮೋಸ ಹೋಗಲು ಬೇಡ ಮನಕೆ ಸುಕ್ಕುಗಳಿಲ್ಲ ಹಿರಿಯತನ ಮುನ್ನಿಲ್ಲ. ಸ...

ಓದದೇ ಬರೇದೇ ಅರೆಘಳಿಗೆ, ಬದುಕಲಾರೆ ಗುರುವೆ, ಸದಾ ನಿನ್ನ ಚರಣದಾಸನು, ಅನಾವರತದಿ ಗುರುವೆ. ಕೃತಕ ನಗೆ, ಸದಾ ಹಗೆ, ನಿತ್ಯ ಸ್ಫೋಟ, ಭೀತಿ ಗುರುವೆ, ನೆಮ್ಮದಿ ಜೀವಕೆ, ಜ್ಞಾನವೊಂದೇ ತಾರಕ ಮಂತ್ರ ಗುರುವೆ. ಓದಿಲ್ಲದೇ ಕುರುಡು ನಾಯಿ ಸಂತೆಗೆ, ಬಂದಂಗೆ...

ಸೂರ್ಯ ನೋಡು ನಿನ್ಹಾಗಲ್ಲ ಎಷ್ಟು ಜಾಣ ಕತ್ತಲಾಗೋದರ ಒಳಗೆ ಮನೆಗೆ ಸೇರ್‍ಕೋಳ್ತಾನೆ ಒಂದು ದಿನಾನು ಲೇಟ್ ಮಾಡೋದಿಲ್ಲ ಕತ್ತಲಾದ ಮೇಲೆ ಒಂದು ಕ್ಷಣವು ಆಕಾಶದಲ್ಲಿರೋದಿಲ್ಲ. *****...

1...4950515253...73

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...